ಹೊನ್ನಾವರ: ತಾಲೂಕಿನ ಜಲವಳ್ ಕರ್ಕಿ ಅರಣ್ಯ ಸರ್ವೇ ನಂ 90 ಅ ನೇದರ ಅತೀಕ್ರಮಣ ಸ್ಥಳದಲ್ಲಿ ನೂತನವಾಗಿ ಕಟ್ಟಿಸಿದ್ದ ಇಮಾರತ್ತನ್ನು ಹೊನ್ನಾವರ ವಲಯ ಅರಣ್ಯಾಧಿಕಾರಿ ಶರತ್ ಚಂದ್ರ ಶೆಟ್ಟಿ ನೇತೃತ್ವದ ಅರಣಾಧಿಕಾರಿಗಳ ತಂಡ ಪೋಲೀಸ್ ಬಂದೊಬಸ್ತನೊಂದಿಗೆ ಗುರುವಾರ ಮುಂಜಾನೆ ತೆರವು ಮಾಡಿದೆ.
ಜೆಸಿಬಿ, ಬ್ರೇಕರ್ ಹಾಗೂ ಅರಣ್ಯ ಇಲಾಖೆ, ಹೆಸ್ಕಾಂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ಮನೆಯ ಒಂದು ಭಾಗವನ್ನು ತೆರವು ಮಾಡಿತು.

ಪ್ರಕರಣದ ವಿವರ: ಜಲವಳ್ಳಿಯ ಮೋಹನ ಹನುಮಂತ ನಾಯ್ಕ ತನ್ನ ಪೂರ್ವಜರು ಅತಿಕ್ರಮಿಸಿ ಬಂದ ಸ್ಥಳದಲ್ಲಿ ಇದ್ದ ಮನೆಯಲ್ಲಿ ವಾಸಮಾಡಿ ಬಂದಿದ್ದ. ಆತ ಕಾಲ ಕಾಲಕ್ಕೆ ಸರ್ಕಾರದ ಜೊತೆ ಭೂಮಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿ ಬಂದಿದ್ದ. ಆ ಬಗ್ಗೆ 1963 ರಿಂದ ದಾಖಲೆಗಳು ಇದ್ದವು 2005 ರ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಅಡಿಯಲ್ಲಿ ಆತ ಅರ್ಜಿ ಸಲ್ಲಿಸಿ ಮಂಜೂರಿಗಾಗಿ ಕೋರಿಕೊಂಡಿದ್ದ. ಕಂದಾಯ ಮತ್ತು ಅರಣ್ಯ ಇಲಾಖೆ ಮೋಜಣೆ ಮಾಡಿ ಆ ಕುರಿತು ಜಿಪಿಎಸ್ ನಕಾಶೆ ಸಿದ್ದಪಡಿಸಿತ್ತು.
ಈ ಮಧ್ಯೆ ಮೋಹನ್ ನಾಯ್ಕ ವಿರುದ್ದ ಸ್ಥಳೀಯ ವ್ಯಕ್ತಿಯೊಬ್ಬ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹೋಗಿ ರಿಟ್ ಅರ್ಜಿ ಸಲ್ಲಿಸಿ ಅತಿಕ್ರಮಣ ತೆರವು ಮಾಡಲು ಕೋರಿದ್ದ. ಈ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯ ಧಾರವಾಡ ಪೀಠವು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ರಿಟ್ ಅರ್ಜಿಯಲ್ಲಿ ಕೋರಿಕೊಂಡಂತೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಾನೂನು ಬಾಹಿರ ಕಟ್ಟೋಣವನ್ನು ತೆರವುಗೊಳಿಸಲು ಅದೇಶಿಸಿತ್ತು ಎನ್ನಲಾಗಿದೆ. ಅಕ್ಟೋಬರ್ 2020 ರಲ್ಲಿ ನೀಡಿದ ಆದೇಶವನ್ನು ಸ್ಥಳಿಯ ಅರಣ್ಯಾಧಿಕಾರಿಗಳು ಜಾರಿಗೆ ತರದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದಾಗಿ ಪುನಃ ಅತಿಕ್ರಮಣ ಸಾಗುವಳಿದಾರ ಮೋಹನ್ ನಾಯ್ಕ ಮತ್ತು ಅರಣ್ಯಾಧಿಕಾರಿಗಳ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು.

ಉಚ್ಛ ನ್ಯಾಯಾಲಯದ ಆದೇಶದ ಅನ್ವಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಮೋಹನ್ ನಾಯ್ಕ ಅತಿಕ್ರಮಣ ಮತ್ತು ಅಕ್ರಮ ಕಟ್ಟಡದ ವಿಚಾರಣೆ ಆರಂಭಿಸಿದ್ದರು. ಕೋವೀಡ್ ಕಾರಣಕ್ಕಾಗಿ ಪ್ರಕರಣ ಮೂಂದುಡಲಾಗಿತ್ತು. ಕೋವೀಡ್ ಕಾರಣಕ್ಕೆ ಮೋಹನ ನಾಯ್ಕ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಪ್ರತಿನಿಧಿಸಲು ವಕೀಲರನ್ನು ಸಂಪರ್ಕಿಸಲಾಗದೆ ಚಡಪಡಿಸುತ್ತಿರುವಾಗಲೆ ತೆರವು ಪ್ರಕ್ರೀಯೆ ನಡೆದಿದ್ದರಿಂದ ಅದು ಸಂಪೂರ್ಣ ಕಾನೂನು ವಿರುದ್ದವಾಗಿದೆ ಎನ್ನಲಾಗಿದೆ.
…………………………………………..…………………………………………………
ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಅದೇಶವನ್ನು ಪಾಲಿಸಿದ್ದೇವೆ. ಅರಣ್ಯ ಕಾಯ್ದೆಯ ಅನ್ವಯ ನಮಗಿರುವ ಅಧಿಕಾರದ ಮೇರೆಗೆ ಅತಿಕ್ರಮಣ ಸ್ಥಳದಲ್ಲಿನ ಹೊಸ ಕಟ್ಟಡವನ್ನು ಮಾತ್ರ ತೆರವುಗೊಳಿಸಿದ್ದೇವೆ. ಇಲ್ಲಿ ಯಾವುದೇ ಕಾನೂನು ವಿರುದ್ದ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ.
-ವಲಯ ಅರಣ್ಯ ಅಧಿಕಾರಿ ಶರತ್ ಶೆಟ್ಟಿ
………………………………………………………………………………………………..
ನೈಸರ್ಗಿಕ ಕಾನೂನಿಗೆ ವಿರುದ್ದವಾಗಿ ಕ್ರಮ ಜರುಗಿಸಲಾಗಿದೆ. 2005 ರ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ 1963 ರಿಂದ ಇರುವ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಜರಪಡಿಸಲಾಗಿದೆ. ಜಿಪಿಎಸ್ ಮೋಜಣೆ ಮಾಡಲಾಗಿದೆ. ಇಂತಹ ಪ್ರಕರಣದಲ್ಲಿ ತೆರವುಗೊಳಿಸಬಾರದೆಂದಿದೆ ಆದರೂ ಅಧಿಕಾರಿಗಳು ಅತಿಕ್ರಮಣದಾರರ ಮೇಲೆ ಕೋವೀಡ್ ಸಾಂಕ್ರಾಮಿಕ ಸಮಂiÀiದಲ್ಲಿ ದಬ್ಬಾಳಿಕೆ ಮಾಡುವುದು ಸರಿಯಲ್ಲ.
-ಅರಣ್ಯ ಅತಿಕ್ರಮಣದಾರರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ
Leave a Comment