ಹೊನ್ನಾವರ: ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೊ ಕೊರೋನಾ ಚಿಕಿತ್ಸೆ ಹಾಗೂ ಟೆಸ್ಟ ಮಾಡಲು ಉಚಿತ ವಾಹನ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಪಂಚಾಯತಿ ಸದಸ್ಯ ದಂಪತಿಗಳು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಕೋರೋನಾ ಸಂಕಷ್ಡದ ಸಮಯದಲ್ಲಿ ನೊಂದವರ ನೆರವಿಗೆ ಸದ್ದಿಲ್ಲದೇ ಸಗಾಯ ಮಾಡುವದರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಶ್ರೀಕಲಾ ಶಾಸ್ರ್ತಿ ಮುಂಚೂಣಿಯಲ್ಲಿದ್ದಾರೆ.
ಕಳೆದ ವರ್ಷ ಹಲವು ಕುಟುಂಬಗಳಿಗೆ ದಿನಸಿ ಹಾಗೂ ಮೆಡಿಸಿನ್ ಮನೆ ಬಾಗಿಲಿಗೆ ತಲುಪಿಸಿದ ಶಾಸ್ತ್ರಿ ದಂಪತಿಗಳು, ಈ ಬಾರಿ ಕಳೆದ ಕೆಲ ದಿನದ ಹಿಂದೆ ತಾಲೂಕ ಆಸ್ಪತ್ರೆಯಲ್ಲಿ ಮಾಹಿತಿ ಕೇಂದ್ರ ವ್ಯವಸ್ಥೆ ಕಲ್ಪಿಸಿದ್ದರು. ಇದೀಗ ಮುಗ್ವಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೆ ಇದ್ದು, ಚಿಕಿತ್ಸೆ ಪಡೆಯಲು ಪ್ರಥಮ ಸಂಪರ್ಕಕ್ಕೆ ಬಂದವರು ಅನೂಕೂಲತೆಗಾಗಿ ವಾಹನ ಸೌಲಭ್ಯ ಪಡೆಯಲು ಶನಿವಾರ ಸಾಲ್ಕೋಡ್ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಸಾಲ್ಕೋಡ್ ಮತ್ತು ಹೊಸಾಕುಳಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿಗಳು ಈ ವಾಹನ ಸೇವೆಗೆ ಸಹಕಾರ ನೀಡಿದ್ದಾರೆ.
ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಈ ಸೌಲಭ್ಯ ಪಡೆಯಬಹುದಾಗಿದ್ದು, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ರಾಜು ನಾಯ್ಕ; 9448794497( ವಾಹನ ಚಾಲಕರು)ಸುಬ್ರಹ್ಮಣ್ಯ ಶಾಸ್ತ್ರಿ;+919886658145ಗಣಪತಿ ಭಟ್+919482661344ಕಿರಣ ಹೆಗಡೆ9480130866ವಿಶ್ವನಾಥ ಭಟ್+918762734895 ಇವರನ್ನು ಸಂಪರ್ಕಿಸಬಹುದು .
ಈ ಸಂದರ್ಭದಲ್ಲಿಬಹೊಸಾಕುಳಿ ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ ಸದಸ್ಯ ಗಣಪತಿ ಭಟ್, ಪಂಚಾಯತ ಅಭಿವೃದ್ದಿ ಅಧಿಕಾರಿ ವಿ.ಎ. ಪಟಗಾರ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್ ಗ್ರಾಮಸ್ಥರಾದ ಮಣಿಕಂಠ ಶೆಟ್ಟಿ ಶ್ರೀಧರ ನಾಯ್ಕ, ವಿಶ್ವನಾಥ ಸಾಲ್ಕೋಡ್ ಇಲಾಖೆಯ ಸಿಬ್ಬಂದಿಗಳಾದ ಪಾಡುರಂಗ ನಾಯ್ಕ,ಶ್ರೀಕಾಂತ ಭಂಡಾರಿ ಸುಧಾಕರ ಭಂಡಾರಿ ಚಿನ್ಮಯ ನಾಯ್ಕ, ಚಿದಾನಂದ ನಾಯ್ಕ ಹಾಜರಿದ್ದರು.
ಸಾಲ್ಕೊಡ್ ಪ್ರಾಥಮಿಕ ಆರೊಗ್ಯ ಕೇಂದ್ರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೊಂಕಿತರು ಹೆಚ್ಚಳವಾಗುತ್ತಿದ್ದು, ಈ ವಾಹನ ಸೇವೆ ಟೆಸ್ಟಿಂಗ್ ಆಗಮಿಸಲು ಚಿಕಿತ್ಸೆ ಪಡೆಯಲು ಅನೂಕೂಲವಾಗಲಿದೆ. ಇದರ ಸದುಪಯೋಗ ಪಡೆಯುವ ಜೊತೆ ಆರೊಗ್ಯದ ಕಡೆ ಗಮನಹರಿಸಿ ಡಾ. ಸಂತೋಷ್ ವೈದ್ಯಾಧಿಕಾರಿ ಪ್ರಾಥಮಿಕ ಆರೊಗ್ಯ ಕೇಂದ್ರ….ಮುಗ್ವಾ ಕ್ಷೇತ್ರದ ಗ್ರಾಮಗಳಿಗೆ ಅನೂಕೂಲ ಕಲ್ಪಿಸಲು ಹಲವು ಜನರ ಸಹಕಾರದ ಮೇರೆಗೆ ಈ ಸೇವೆ ಆರಂಭಿಸಿದ್ದು, ಸಂಪೂರ್ಣ ಉಚಿತವಾಗಿದ್ದು, ಸಹಕಾರ ನೀಡುವ ಮೂಲಕ ಕೈ ಜೋಡಿಸಬಹುದು. ಕೋವಿಡ್ ಬಗ್ಗೆ ನಿಲಕ್ಷ ಬೇಡ ಜಾಗೃತಿ ವಹಿಸಿ. ಗುಣಲಕ್ಷಣ ಕಂಡಕೂಡಲೇ ವೈದ್ಯರ ಸಲಹೆ ಪಾಲಿಸಿರಿ. ಮಾಸ್ಕ ಹಾಗೂ ಸಾಮಾಜಿಕ ಅಂತರ ಪಾಲಿಸುವ ಮೂಲಕ ಈ ರೋಗದಿಂದ ದೂರವಿರೋಣ. ನಮ್ಮ ಹಾಗೂ ಮನೆಯವರ ಆರೋಗ್ಯ ನಮ್ಮೆಲ್ಲರ ಕೈಯಲ್ಲಿದೆ ಎನ್ನುವ ಗಮನವಿರಲಿ.ಶ್ರೀಕಲಾ ಶಾಸ್ತ್ರಿ ಜಿಲ್ಲಾ ಪಂಚಾಯತಿ ಸದಸ್ಯೆ ಮುಗ್ವಾ.
Leave a Comment