ಹೊನ್ನಾವರ : ಬಾಳಾ ಬಾಳೇರಿ ಕುಟುಂಬ ಮತ್ತು ಬಂಧು ಮಿತ್ರರ ಸಹಕಾರದೊಂದಿಗೆ ಕೋರೊನಾ ಸೋಂಕಿತರ ನೇರವಿಗಾಗಿ ಸುಮಾರು 1ಲಕ್ಷ 25ಸಾವಿರ ಮೌಲ್ಯದ ಔಷಧಗಳನ್ನು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿಯವರ ಉಪಸ್ಥಿತಿಯಲ್ಲಿ ತಹಶಿಲ್ದಾರರಾದ ವಿವೆಕ ಶೇಣ್ವಿಯವರಿಗೆ ಹಸ್ತಾಂತರಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಊರ ನಾಗರಿಕರಲ್ಲಿ ಕೋವಿಡ್ ಸೋಂಕಿತರ ನೇರವಿಗಾಗಿ ಮುಂದೆ ಬರುವಂತೆ ತಹಶಿಲ್ದಾರರವರು ಮನವಿಯನ್ನು ಮಾಡಿದ್ದರು. ಕಳೆದ ವರ್ಷ ಲಾಕ್ಡೌನ್ ಸಂಧರ್ಬದಲ್ಲಿ ಬಾಳಾ ಬಾಳೆರಿ ಹಾಗು ಮಿತ್ರವರ್ಗದವರು ಅಧಿಕಾರಿ ವರ್ಗ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಕಳೆದ ಬಾರಿಗಿಂತ ಈ ಬಾರಿ ಸೋಂಕಿತ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದನ್ನು ಮನಗೊಂಡು ಬಂದು ಮಿತ್ರರ ಸಹಾಯದಿಂದ ಸೋಂಕಿತರಿಗೆ ನೇರವಾಗಲು ಔಷದಿಗಳನ್ನು ತಹಶಿಲ್ದಾರರವರಿಗೆ ಹಸ್ತಾಂತರಿಸುತ್ತಿದ್ದೆವೆ. ಸೋಂಕಿತರ ನೆರವಿಗಾಗಿ ಮಿತ್ರವರ್ಗದವರು ಮುಂದೆ ಬರುತ್ತಿದ್ದು ಇನ್ನು ಹೆಚ್ಚಿನ ಸೇವೆ ಬೆಕಿದ್ದಲ್ಲಿ ಮಾಡಲು ಸಿದ್ಧರಿವುದಾಗಿ ತಿಳಿಸಿದರು.
ಈ ಸಂಧರ್ಬದಲ್ಲಿ ಪ.ಪಂ ಅಧ್ಯಕ್ಷರಾದ ಶಿವರಾಜ ಮೇಸ್ತ, ಸುಧೆಶ ನಾಯ್ಕ, ವಿಮಲೇಶ ರೆವಣಕರ, ದಾಮೋದರ ಹೆಗ್ಡೆ ಉಪಸ್ಥಿತರಿದ್ದರು.
Leave a Comment