ಹೊನ್ನಾವರ; ಪಟ್ಟಣದ ರಾಮತೀರ್ಥ ತಿರುವಿನ ಸಮೀಪ ಅಂಬುಲೆನ್ಸ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ರೋಗಿ ಸಾವನ್ನಪ್ಪಿ ಚಾಲಕ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಕುಮಟಾದಿಂದ ಅಂಬುಲೆನ್ಸನಲ್ಲು ಚಿಕಿತ್ಸೆಗಾಗಿ ಸಾಗಿಸುತ್ತಿರುವ ವ್ಯಕ್ತಿ ಮೃತಪಟ್ಟರೆ, ಅಂಬುಲೆನ್ಸ ಚಾಲಕ ತಿವ್ರ ಗಾಯಗೊಂಡಿದ್ದು ಉಡುಪಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಪಿಡ್ಸ್ ರೋಗದಿಂದ ಬಳಲುತ್ತಿದ್ದ ಗೋಕರ್ಣ ಮೂಲದ ರಾಮಕೃಷ್ಣ ಗಣಪತಿ ಪ್ರಸಾದ ( 70 ) ಇವರನ್ನು ಗೋಕರ್ಣದಿಂದ ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ತರುತ್ತಿದ್ದಾಗ ಆಂಬುಲೆನ್ಸ್ ವಾಹನಕ್ಕೆ ಮಂಗಳೂರಿನಿಂದ ಕುಮಟಾ ಕಡೆಗೆ ಹೋಗುವ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರಲ್ಲಿಅಂಬುಲೆನ್ಸಗೆ ಢಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಅಂಬುಲೆನ್ಸ್ ನಲ್ಲಿದ ರಾಮಕೃಷ್ಣ ಗಣಪತಿ ಪ್ರಸಾದ ಇವರು ಮೃತಪಟ್ಟಿದ್ದಾರೆ. ಕುಮಟಾ ಬಗ್ಗೂಣ ಮೂಲದ ಅಂಬುಲೆನ್ಸ್ ಚಾಲಕ ಜಾನು ದತ್ತಾ ನಾಯ್ಕ ( 45 ) ಗಂಭೀರ ಗಾಯಗೊಂಡಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬುಲೆನ್ಸನಲ್ಲಿದ್ದ ಬಾಲಚಂದ್ರ ಗಣಪತಿ ಪ್ರಸಾದ್ ( 37) ತಾಳೆಮಕ್ಕಿಯಸುಮನಾ ರಾಮಾ ಗೌಡ (50) ಅಪಘಾತದಲ್ಲಿ ಗಾಯಗೊಂಡಿದ್ದು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ಯಾಸ್ ಟ್ಯಾಂಕರ್ ಲಾರಿ ಚಾಲಕ ಪರಾರಿಯಾಗಿದ್ದು, ಅಪಘಾತ ಸ್ಥಳದಿಂದ ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳಾಂತರಿಸಿ ರಸ್ತೆ ಸಂಚಾರ ಸುಗಮಗೊಳಿಸಲಾಗಿದೆ. ಗ್ಯಾಸ್ ಟ್ಯಾಂಕರ್ ಚಾಲಕನ ವಿರುದ್ದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Comment