ಹಳಿಯಾಳ :- ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದ ಪ್ರವಾಸೋಧ್ಯಮ ಇಲಾಖೆಯ ಯಾತ್ರಿ ನಿವಾಸವನ್ನು ಮತ್ತೇ ಕೊವಿಡ್ ಕೇರ್ ಸೆಂಟರನ್ನಾಗಿ ಪರಿವರ್ತಿಸಲಾಗಿದೆ ಎಂದು ಹಳಿಯಾಳ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ತಿಳಿಸಿದ್ದಾರೆ.

ಶನಿವಾರ ಕೊವಿಡ್ ಕೇರ್ ಸೆಂಟರ್ಗೆ ಚಾಲನೆ ನೀಡಿ ಸೊಂಕಿತರನ್ನು ದಾಖಲು ಮಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಪಿಡಿತರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಹಾಗೂ ಆರೈಕೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದ್ದು. ರೋಗ ಲಕ್ಷಣ ಇದ್ದ ಸೊಂಕಿತರು ಇಲ್ಲಿ ಉಳಿದು ಚಿಕಿತ್ಸೆ ಪಡೆಯಲು ಬಯಸಿದರೇ ಅವರಿಗೆ ಇಲ್ಲಿ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ಭಿಮನ್ನಾ ಸಿನ್ನೂರ, ಪ್ರಮುಖರಾದ ಚಿಪ್ಪಲಕಟ್ಟಿ, ವಸಂತ ಮೊದಲಾದವರು ಇದ್ದರು.
Leave a Comment