ಹಳಿಯಾಳ :- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಕೋವಿಡ್ -19 ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ತಜ್ಞ ವೈದ್ಯರಿಂದ ಆಯೋಜಿಸಿದ ವೆಬಿನಾರ್ ಯಶಸ್ವಿಯಾಗಿದೆ.

ಧಾರವಾಡದ ಆರೋಗ್ಯ ಸ್ಪರ್ಶ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಜನರಲ್ ಫಿಸಿಷಿಯನ್ ಡಾ. ಗೀತಾ ಬಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋವಿಡ್-19 ಮತ್ತು ಬ್ಲಾಕ್ ಫಂಗಸ್ ಗೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾಹಿತಿ ನೀಡಿದರು. ಕೊರೊನಾ ರೋಗದ ಹಿನ್ನೆಲೆ, ಗುಣಲಕ್ಷಣಗಳು, ಈ ಕುರಿತ ಮಾನಸಿಕ ಸಮಸ್ಯೆಗಳು, ಯೋಗಭ್ಯಾಸದ ಪಾತ್ರ, ಲಸಿಕೆಯ ಪ್ರಾಮುಖ್ಯತೆ ಮತ್ತು ಲಾಕ್ ಡೌನ್ ಸಂದರ್ಭದ ಸದುಪಯೋಗದ ಕುರಿತು ಶ್ರೋತೃಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಗೂಗಲ್ ಮೀಟ್ ಮುಖಾಂತರ ನಡೆದ ಈ ಕಾರ್ಯಕ್ರಮದಲ್ಲಿ 110ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಫೇಸ್ಬುಕ್ ಮುಖಾಂತರವೂ ಈ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ವಿ ಎ ಕುಲಕರ್ಣಿ, ಪೆÇ್ರ. ಪಾರ್ವತಿ ಓಣಿ ಸ್ವಾಗತಿಸಿದರು. ಪೆÇ್ರ. ಶಾಂತರಾಮ ಚಿಬ್ಬುಲಕರ ನಿರೂಪಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪೆÇ್ರ. ಹರ್ಷ ಜಾಧವ ವಂದಿಸಿದರು. ಪೆÇ್ರ. ಪ್ರಸನ್ನ ಕುಲಕರ್ಣಿ ಇದ್ದರು.
Leave a Comment