ಹೊನ್ನಾವರ; ಎಲ್ಲಡೆ ಕೊರೋನಾ ಬಗ್ಗೆ ಕಾಳಜಿ, ಸುರಕ್ಷತಾ ಕ್ರಮ ಹಾಗೂ ನಿಗ್ರಹಕ್ಕಾಗಿ ಹಲವು ಕ್ರಮ ಕೈಗೊಳ್ಳುವತ್ತ ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಆದರೆ ಕೋರೋನಾ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರ ಸ್ಥಿತಿ ಹೇಳತೀರದಾಗಿದೆ.

ಒಂದಡೆ ಉದ್ಯೋಗ ಭದ್ರತೆ ಇಲ್ಲ. ಇನ್ನೊಂದಡೆ ಕಳೆದ ಮೂರು ತಿಂಗಳಿನಿಂದ ಗೌರವಧನವಿಲ್ಲ. ಈ ಎಲ್ಲಾ ಸಂಕಷ್ಟದ ಮಧ್ಯೆ ಕೋವಿಡ್ ವ್ಯಕ್ತಿಯ ಪತ್ತೆ ಕಾರ್ಯ ಹಾಗೂ ತಪಾಸಣೆ ಮಾಡಲು ತೆರಳುವರಿಗೆ ಪಿ.ಪಿ.ಇ ಕಿಟ್ ಹೊಗಲಿ, ಮಾಸ್ಕ ಹಾಗು ಸ್ಯಾನಿಟೈಜರ್ ವ್ಯವಸ್ಥೆ ಇಲ್ಲದೇ ತೆರಳಬೇಕಾದ ಅನಿವಾರ್ಯತೆ ಇದೆ. ಗ್ರಾಮಸ್ಥರಿಂದ ಹಿಡಿದು ಪ್ರತಿ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಕೋವಿಡ್ ಸಮಯದಲ್ಲಿ ನೆನಪಿಗೆ ಬರುವ ಈ ಕಾರ್ಯಕರ್ತೆಯರ ಆರೊಗ್ಯದ ಚಿಂತೆ ಯಾರಿಗೂ ಇದ್ದಂತೆ ಕಾಣುತ್ತಿಲ್ಲ. ಕೊವಿಡ್ ಪಾಸಟಿವ್ ಬಂದವರು ಹೋಮ್ ಐಶೊಲೇಶನಲ್ಲಿದ್ದರೆ ಆತನ ದಿನದ ಆರೊಗ್ಯ, ಆಸ್ಪತ್ರೆಗೆ ಸಾಗಿಸುವುದು, ಅವರ ಪ್ರಥಮ ಸಂಪರ್ಕಕ್ಕೆ ಒಳಗಾದವರಿಗೆ ತಪಾಸಣಿ ಸೇರಿದಂತೆ ಸಾಲು ಸಾಲು ಜವಬ್ದಾರಿ ಇವರ ಹೆಗಲಿಗೆ ಹಾಕುತ್ತಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಕೊಡುವ ಗೌರವಧನವನ್ನು ನೀಡಿಲ್ಲ. ಕೋವಿಡ್ ಮಹಾಮಾರಿಗೆ ಹಿಂದಿನ ವರ್ಷ ಮೃತಪಟ್ಟವರಿಗೆ ವಿಮಾ ಸೌಲಭ್ಯವನ್ನು ಇನ್ನು ನೀಡಿಲ್ಲ.ವಿವಿಧ ಕೊರೋನಾ ವಾರಿಯರ್ಸಗೆ ಪೋತ್ಸಾಹಧನ ನೀಡಿದರೆ ಆಶಾದವರಿಗೆ ನೀಡಿಲ್ಲ. ಒಟ್ಟಾರೆ ಕೆಲಸಕ್ಕೆ ಬೇಕು ಸೌಲಭ್ಯ ನೀಡುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕಾರ್ಯಕರ್ತೆಯರಿಂದ ಅಷ್ಟೆ ಅಲ್ಲದೇ ಸಾರ್ವಜನಿಕ ವಲಯದಿಂದಲೂ ಕೇಳಿಬರುತ್ತಿದೆ.ಸೋಮವಾರ ತಾಲೂಕಿನ ಹಲವು ಆಶಾ ಕಾರ್ಯಕರ್ತೆಯರು ಉದ್ಯೋಗ ಭದ್ರತೆ, ಸೊಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ನೆರವು, ಬಾಕಿ ಇರುವ ಮೂರು ತಿಂಗಳ ಗೌರವಧನ, ಹಾಗೂ ಸುರಕ್ಷತಾ ಪರಿಕರವನ್ನು ವಿತರಿಸುವಂತೆ ಆಗ್ರಹಿಸಿ ತಮ್ಮ ಮನೆಯಿಂದಲೇ ಆನಲೈನ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕರ್ತವ್ಯ ಜೊತೆ ಪ್ರತಿಭಟನೆ ಆರಂಭವಾಗಿದ್ದು, ಸರ್ಕಾರ ಈ ಪ್ರತಿಭಟನೆ ಕಿಚ್ಚು ಹೆಚ್ಚಾಗುವ ಮುನ್ನ ಪ್ರಮುಖ ಬೇಡಿಕೆ ಈಡೇರಿಸುವತ್ತ ಗಮನ ಹರಿಸಬೇಕಿದೆ…….ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿಯೂ ಕೋವಿಡ್ ಆರ್ಭಟಿಸುತ್ತಿದ್ದು, ದಿನವೀಡಿ ರೋಗದ ನಿಯಂತ್ರಣಕ್ಕೆ ಎಲ್ಲರಂತೆ ನಾವು ಶ್ರಮಿಸುತ್ತಿದ್ದೇವೆ. ಆದರೆ ಕಳೆದ ಮೂರು ತಿಂಗಳಿನಿಂದ ಗೌರವಧನ ನೀಡಿಲ್ಲ. ಆರೊಗ್ಯ ಭದ್ರತೆಯು ಇಲ್ಲ. ಸುಕ್ಷತಾ ಸಲಕರಣೆ ನೀಡದೇ ನಾವು ಸೊಂಕಿತರ ಮನೆಗೆ ತೆರಳಿ ತಪಾಸಣಿ ಮಾಡಬೇಕಿದೆ. ನಮ್ಮ ಹಾಗೂ ನಮ್ಮ ಕುಟುಂವದ ಆರೊಗ್ಯದ ಚಿಂತೆ ಕಾಡುತ್ತಿದೆ. ಸರ್ಕಾರ ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಎಂದು ನಾವು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ.
ಪ್ರಭಾಮಣಿ ಶೆಟ್ಟಿರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ ಯೂನಿಯನ್ ತಾಲೂಕ ಅಧ್ಯಕ್ಷರು
Leave a Comment