ಹೊನ್ನಾವರ: ಪಟ್ಟಣದ ಕಮಟೆಹಿತ್ತಲ್, ಕರ್ಕಿಕೋಡಿ ಭಾಗದ ಕಡು ಬಡ ಕುಟುಂಬಕ್ಕೆ ರಾಷ್ಟೀಯ ಮೀನುಗಾರ ಸಂಘಟನೆಯ ಅಜಿತ್ ತಾಂಡೇಲ್ ಮುಂದಾಳತ್ವದಲ್ಲಿ ಪದಾಧಿಕಾರಿಗಳು ಒಗ್ಗೂಡಿ ದಿನಸಿ ಹಾಗೂ ತರಕಾರಿ ಕಿಟ್ ವಿತರಿಸುವ ಮೂಲಕ ನೆರವಾದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುದರಿಂದ ಜನತೆ ಸಂಕಷ್ಟದಲ್ಲಿದ್ದರು. ಇದನ್ನು ಮನಗಂಡು ಪದಾಧಿಕಾರಿಗಳು ಬಡ ಕುಟುಂಬಕ್ಕೆ ಕಿಟ್ ವಿತರಿಸಿದರು. ಅಲ್ಲದೇ ಹಲವು ವರ್ಗಗಳಿಗೆ ರಾಜ್ಯ ಸರ್ಕಾರ ಕೋವಿಡ್ ಪರಿಹಾರ ಪ್ಯಾಕೇಜ್ ನೀಡಿದ್ದು ಮೀನುಗಾರರಿಗೆ ಯಾವುದೇ ರೀತಿಯಲ್ಲಿ ಅನುದಾನ ಮೀಸಲಾಗಿಲ್ಲ.
ಅಲ್ಲದೇ ಮತ್ಸಕ್ಷಾಮ ತಲೆದೂರಿದ್ದು, ಸರ್ಕಾರ ಮೀನುಗಾರ ಕುಟುಂಬಗಳಿಗೂ ಪರಿಹಾರದ ಪ್ಯಾಕೇಜ್ ನೀಡುವಂತೆ ಸಂಘಟನೆಯ ಶ್ರೀರಾಮ್ ಜಾದುಗಾರ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಿತ್ ತಾಂಡೇಲ್, ಹನೀಫ್ ಶೇಖ್, ಕೃಷ್ಣ ಹರಿಜನ, ಮಂಜುನಾಥ ಖಾರ್ವಿ, ಚಂದ್ರಕಾಂತ, ಸತೀಶ ತಾಂಡೇಲ್ ಮತ್ತಿತರರು ಹಾಜರಿದ್ದರು.


Leave a Comment