ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ’
‘ಕುದ್ದು ಅಂಬ್ಯುಲೆನ್ಸ ಚಲಾಯಿಸಿ ಸರಕಾರಿ ಆಸ್ಪತ್ರೆಗೆ ತಂದ ಶಾಸಕ ಸುನೀಲ ನಾಯ್ಕ’
ಭಟ್ಕಳ: ಶಾಸಕರ ಪ್ರಾದೇಶಿಕಾಭಿವೃದ್ಧಿ ನಿಧಿ ಯೋಜನೆಯಿಂದ ಭಟ್ಕಳ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಗಳಿಗೆ ಒಟ್ಟೂ 40 ಲಕ್ಷ ರೂಪಾಯಿ ವೆಚ್ಚದ 2 ನೂತನ ಅಂಬ್ಯುಲೆನ್ಸ್ ಗಳನ್ನು ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಾಸಕ ಸುನೀಲ ನಾಯ್ಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ತಾಲೂಕಿನ ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊದಲು ದೇವಿಗೆ ಪೂಜೆ ಸಲ್ಲಿಸಿದ ಶಾಸಕರು ನಂತರ ದೇವಸ್ಥಾನದ ಅರ್ಚಕರಿಂದ ನೂತನ ಎರಡು ಅಂಬ್ಯುಲೆನ್ಸಗೆ ಪೂಜೆ ಸಲ್ಲಿಸಿದರು. ನಂತರ ಶಾಸಕ ಸುನೀಲ ನಾಯ್ಕ ಭಟ್ಕಳ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸುವ ಒಂದು ಅಂಬ್ಯುಲೆನ್ಸನ್ನು ದೇವಸ್ಥಾನದಿಂದ ಭಟ್ಕಳ ತಾಲೂಕು ಆಸ್ಪತ್ರೆಯವರೆಗೆ ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸ್ವತಃ ಅಂಬ್ಯುಲೆನ್ಸನ್ನು ಚಲಾಯಿಸಿದ್ದು, ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರು ಸಾಥ್ ನೀಡಿದ್ದು ನೂತನ ಆಂಬ್ಯುಲೆನ್ಸ್ ನ ಗುಣಮಟ್ಟವನ್ನು ಪರಿಶೀಲಿಸಿ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ಹಸ್ತಾಂತರಿಸಿದರು.
ಆಸ್ಪತ್ರೆಯ ಹಲವು ವರ್ಷಗಳ ಬೇಡಿಕೆಯಾದ್ದರಿಂದ, ಆಸ್ಪತ್ರೆಯ ವೈದ್ಯರು, ನರ್ಸಗಳು, ಹಾಗೂ ಸಿಬ್ಬಂದಿಗಳು ತಮ್ಮ ಆಸ್ಪತ್ರೆಯ ನೂತನ ಅಂಬ್ಯುಲೆನ್ಸ ನ್ನು ಚಪ್ಪಾಳೆ ತಟ್ಟಿ ಹೂವು ಚೆಲ್ಲುವುದರ ಮೂಲಕ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ನಂತರ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ ಕೋವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ ಅವಶ್ಯಕತೆಯಿದ್ದು, ಈಗಾಗಲೇ ಸರಕಾರಕ್ಕೆ ಮನವಿ ಮಾಡಿದ್ದರ ಹಿನ್ನೆಲೆ ಇಂತಹ ತುರ್ತು ಸಂದರ್ಭದಲ್ಲಿ ಎರಡು ಅಂಬ್ಯುಲೆನ್ಸ ಜನರ ಸೇವೆಗೆ ಸಿಕ್ಕಿದ್ದು ಸಂತಸವಾಗಿದೆ. ಒಟ್ಟೂ 40 ಲಕ್ಷ ರೂಪಾಯಿ ವೆಚ್ಚದ 2 ನೂತನ ಅಂಬ್ಯುಲೆನ್ಸ ಮೊದಲ ಹಂತದಲ್ಲಿ ಒದಗಿಸಿದ್ದು, ಅದೇ ರೀತಿ ಶಿರಾಲಿ ಮತ್ತು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ 2 ಅಂಬ್ಯುಲೆನ್ಸ ಗಳ ಖರೀದಿಗೆ ಅನುದಾನವನ್ನು ಈಗಾಗಲೇ ಒದಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಎರಡು ಆಂಬ್ಯುಲೆನ್ಸ್ ಗಳೊಂದಿಗೆ ಮತ್ತೆ ಎರಡು ಆಂಬ್ಯುಲೆನ್ಸ್ ಗಳು ಕ್ಷೇತ್ರದ ಜನರಿಗಾಗಿ ಕಾರ್ಯ ನಿರ್ವಹಿಸಲಿದೆ. ಕೋವಿಡ್ ವೇಳೆ ಜನರಿಗೆ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಈಗಾಗಲೇ ನನ್ನ ವೈಯಕ್ತಿಕ ವೆಚ್ವದಲ್ಲಿ ಎರಡು ಅಂಬ್ಯುಲೆನ್ಸ ಭಟ್ಕಳ ಹೊನ್ನಾವರದ ಜನರ ಸೇವೆಯಲ್ಲಿದ್ದು 25 ದಿನದಿಂದ ಅದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಈಗ ಹಸ್ತಾಂತರಿಸಲಾದ ಎರಡು ಅಂಬ್ಯುಲೆನ್ಸ ಆಕ್ಸಿಜನ್ ವ್ಯವಸ್ಥೆ ಇದ್ದು, ಜನರಿಗೆ ತಕ್ಷಣಕ್ಕೆ ಆಸ್ಪತ್ರೆಯಂತಹ ಸೇವೆ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ. ಜನರು ಭಯಭೀತರಾಗಿದ್ದು, ಅವರ ಕುಟುಂಬದವರನ್ನು ರಕ್ಷಿಸಿಕೊಳ್ಳಲು ಸಾಹಸ ಮಾಡುತ್ತಿದ್ದಾರೆ. ಜನರೊಂದಿಗೆ ವೈದ್ಯರು, ತಾಲೂಕಾಢಳಿತ ಶಾಸಕರು ಇದ್ದು ಯಾವುದೇ ತುರ್ತು ಸಂದರ್ಭದಲ್ಲಿ ನಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ ನಾಯಕ, ಸಹಾಯಕ ಆಯುಕ್ತ ಮಮತಾ ದೇವಿ ಜಿ.ಎಸ್., ತಹಸೀಲ್ದಾರ ರವಿಚಂದ್ರ, ಸರಕಾರಿ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿ ಡಾ. ಸವಿತಾ ಕಾಮತ, ಬಿಜೆಪಿ ಹಿರಿಯ ಮುಖಂಡರು, ಪ್ರಮುಖರು ಇದ್ದರು.
Leave a Comment