ದಾಂಡೇಲಿ ವೃತ್ತ ವ್ಯಾಪ್ತಿಯ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ಚಿಯಲ್ಲಿ ದಿನಾಂಕ: 01.05.2021 ರಂದು ಸ್ವಿಫ್ಟ ಡೀಸೈರ ಕಾರ್ ನಂ: ಕೆ.ಎ-36 ಎಸ್-1100 ನೇದರಲ್ಲಿ ಆಪಾದಿತರು ದಾಂಡೇಲಿಯಿಂದ ಖೋಟಾ ನೋಟು ಸಾಗಿಸುತ್ತಿದ್ದಾರೆ .

ಎಂಬ ಖಚಿತ ಮಾಹಿತಿ ಸಿಕ್ಕ ಮೇರೆಗೆ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಶ್ರೀ ಬದ್ರಿನಾಥ ಎಸ್ ಹಾಗೂ ದಾಂಡೇಲ ಉಪ-ವಿಭಾಗದ ಡಿವೈಎಸ್ಪಿ ಶ್ರೀ ಕೆ.ಎಲ್. ಗಣೇಶ ಸಿ.ಪಿ.ಐ-ದಾಂಡೇಲಿ ಶ್ರೀ ಪ್ರಭು ಆರ್ ಗಂಗನಹಳ್ಳ ರವರ ಮಾರ್ಗದರ್ಶನದಲ್ಲಿ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ.(ಕಾ&ಸು) ಶ್ರೀ ಐ.ಆರ್ ಗಡ್ಡೆಕರ, ಪಿ.ಎಸ್.ಐ ಶ್ರೀ ಯಲ್ಲಾಲಿಂಗ ಕೊನ್ನೂರ, ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ&ಸು) ಯಲ್ಲಪ್ಪ ಎಸ್, ಹಾಗೂ ದಾಂಡೇಲಿ ಗ್ರಾಮೀಣ ಪೊಲೀಸ ಠಾಣೆಯ ಅಧಿಕಾರಿ/ಸಿಬ್ಬಂದಿಗಳಾದ ಎ.ಎಸ್.ಐ ಮಹಾವೀರ ಕಾಂಬಳೆ, ಸಿ.ಹೆಚ್.ಸಿ-1569 ಉಮೇಶ ತುಂಬರಗಿ, ಸಿ.ಪಿ.ಸಿ-1852 ರವಿ ಚವಾಣ, ಸಿ.ಪಿ.ಸಿ-789 ಮಂಜುನಾಥ ಶೆಟ್ಟಿ, ಸಿ.ಪಿ.ಸಿ-1679 ರೇವಪ್ಪ ಬಂಕಾಪುರ, ಸಿ,ಪಿ.ಸಿ-627 ರೋಹಿತ, ಹಾಗೂ ಜೀಪ ಚಾಲಕ ಸಿ.ಹೆಚ್.ಸಿ-1727 ದಯಾನಂದ ಲೋಂಡಿ, ಮತ್ತು ದಾಂಡೇಲ ನಗರ ಪೊಲೀಸ ಠಾಣೆಯ ಸಿಬ್ಬಂದಿಗಳಾದ ಸಿ.ಹೆಚ್.ಸಿ-671 ಬೀಮಪ್ಪ ಕೆ. ಪಿ.ಪಿ.ಸಿ-784 ಆದಪ್ಪ ಧಾರವಾಡಕರ, ಸಿ.ಪಿ.ಸಿ 1036 ಚಿನ್ಮಯ ಪತ್ತಾರ, ಮತ್ತು ಜೀಪ ಚಾಲಕನಾದ ಎ.ಹೆಚ್.ಸಿ-935 ದಶರಥ ಲಕ್ಕಾಪುರ ರವರನ್ನು ಒಳಗೊಂಡ ತಂಡವನ್ನು ರಚಿಸಿ ದಾಳಿ ನಡೆಸಿ ಪ್ರಕರಣವನ್ನು ಪತ್ತೆ ಮಾಡಿದ್ದು ಇರುತ್ತದೆ. .

ನಂತರ ಆಪಾದಿತನನ್ನು ವಿಚಾರಣೆ ಮಾಡಲಾಗಿ ದಾಂಡೇಲಿ ನಗರದ ಶಿವಾಜಿ ತಂದೆ ಶ್ರವಣ ಕಾಂಬಳೆ ಹಾಗೂ ಶಬ್ಬೀರ @ ಅಂತೋನಿ ತಂದೆ ಇಸ್ಮಾಯಿಲ್ ಕುಟ್ಟಿ ಈ ಇಬ್ಬರು ನಮಗೆ 4,50,000/-ರೂ ಹಣವನ್ನು ನೀಡಿದರೆ, ಅದಕ್ಕೆ ಬದಲಾಗಿ 9,00,000/- ರೂ ನೀಡುತ್ತೇವೆ ಎಂದು ನಂಭಿಸಿ ದಾಂಡೇಲಿಗೆ ಬರಲು ಸೂಚಿಸಿದ್ದು, ಅದರಂತೆ ನಾವು ದಾಂಡೇಲಿಗೆ ಬಂದು ಸದರಿಯವರನ್ನು ಸಂಪರ್ಕಿಸಿದಾಗ ಅಂತೋನಿ @ ಶಬೀರ ಎಂಬಾತನು ನಮ್ಮನ್ನು ಭರ್ಚಿಯ ಬಳಿ ಬರುವಂತೆ ತಿಳಿಸಿದ್ದು, ಅದರಂತೆ ನಾವು ಭರ್ಚಿ ಬಳಿ ಬಂದಾಗ ಶಬೀರ @ ಅಂತೋನಿ ನಮ್ಮ ಕಾರಿನ ಬಳಿ ಬಂದು 9,00,000/- ರೂ. ಹಣ ನೀಡಿ ನಮ್ಮಿಂದ 4,50,000/- ರೂ ಕೇಳಿದಾಗ ನಾವು ಅದನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿ ಪರಿಶೀಲನೆ ಮಾಡುವಷ್ಟರಲ್ಲಿ ಪೊಲೀಸರು ನಮ್ಮನ್ನು ಬಂದು ಹಿಡಿದುಕೊಂಡಿರುತ್ತಾರೆಂದು ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದು, ಅದರಂತೆ ಶಬ್ಬೀರ ಹಾಗೂ ಶಿವಾಜಿರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದು ಸದರಿಯವರು ಕೃತ್ಯವನ್ನು ಒಪ್ಪಿಕೊಂಡು ಹೇಳಿಕೆಯನ್ನು ನೀಡಿರುತ್ತಾರೆ. ಸದರಿಯವರ ಹೇಳಿಕೆಯ ಆಧಾರ ಮೇಲೆ ಶಿವಾಜಿ ಈತನ ಮನೆಗೆ ತೆರಳಿ ಪರಿಶೀಲನೆ ನಡೆಸಿದರಲ್ಲ 500/- ರೂ ಮುಖ ಬೆಲೆಯ ನಕಲಿ ನೋಟಿನ ಬಂಡಲುಗಳು 88, 2000/- ರೂ ಮುಖ ಬೆಲೆಯ ನಕಲಿ ನೋಟಿನ ಬಂಡಲುಗಳು-6, 200/- ರೂ. ಮುಖ ಬೆಲೆಯ ನಕಲಿ ನೋಟಿನ ಬಂಡಲುಗಳು-28 ಹಾಗೂ 100/ ರೂ. ಮುಖ ಬೆಲೆಯ ನಕಲಿ ನೋಟುಗಳ ಬಂಡಲು-2 ಮತ್ತು ಎ-4 ಸೈಜ್ ಹಾಳೆಯಲ್ಲಿ ಮುದ್ರಿಸಿರುವ 500/- ಮುಖ ಬೆಲೆಯ ಇರುವ ನಕಲಿ ನೋಟುಗಳು, ಪೇಪರ ಕಟಿಂಗ್ ಮಷೀನ್ ಇವುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಇರುತ್ತದೆ.

ಆಪಾದಿತ ಶಿವಾಜಿ ಈತನಿಗೆ ನೋಟು ಮುದ್ರಣ ಮಾಡಲು ಸಹಾಯ ಮಾಡಿರುವಂತಹ ವ್ಯಕ್ತಿಗಳ ಬಗ್ಗೆ ತನಿಖೆ ಮುಂದುವರಿದಿದೆ. ಹಾಗೂ ಈತನು ಈ ಹಿಂದೆ ಯಾರು ಯಾರಿಗೆ ಈ ರೀತಿ ನಕಲಿ ನೋಟು ನೀಡಿ ಮೋಸ ಮಾಡಿರುತ್ತಾನೆ ಎಂಬ ಬಗ್ಗೆ ತನಿಖೆ ಮುಂದುವರಿದೆ.ಈ ಬಗ್ಗೆ ದಿನಾಂಕ: 01.06.2021 ರಂದು ದಾಂಡೇಲಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ನಂ: 34/2021 ಕಲಂ: 489(ಬಿ),489 (ಸಿ) ಸಹಿತ 34 ಐಪಿಸಿ ಪ್ರಕರಣದಲ್ಲಿನ ಆರೋಪಿತರಾದ,
( ನಕಲ ನೋಟು ಖರೀದಿಸಲು ಬಂದವರು )
1. ಕಿರಣ ತಂದೆ ಮಧುಕರ ದೇಸಾಯಿ, 40ವರ್ಷ, ವೃತ್ತಿ: ಟ್ರಾನ್ಸ್ಪೋರ್ಟ ಕೆಲಸ ಸಾ: 9/15, ಮಜಗಾಂವ ರೋಡ್, ಆದಿನಾಥ ಕ್ವಾಟಕಾ ಬಿಲ್ಡಿಂಗ್, ರತ್ನಗಿರಿ, ಮಹಾರಾಷ್ಟ್ರ ಜಿಲ್ಲೆ.
2. ಗಿರೀಶ ತಂದೆ ನಿಂಗಪ್ಪ ಪೂಜಾರಿ, 42 ವರ್ಷ, ವೃತ್ತಿ: ಗ್ಯಾರೇಜ್ ಕೆಲಸ ಸಾ: ಮ.ನಂ: 965, ಜಾಖಾದೇವಿ, ಪೋಸ್ಟ್: ಜಾಖಾದೇವಿ, ತಾ&ಜಿ ರತ್ನಾಗಿರಿ, ರಾಜ್ಯ ಮಹಾರಾಷ್ಟ್ರ
3. ಅಮರ ತಂದೆ ಮೋಹನ ನಾಯ್ಕ 30ವರ್ಷ, ವೃತ್ತಿ: ಚಾಲಕ ಸಾ|| ಕಿಣಿಯೇ, ಬೆಳಗಾವಿ 4. ಸಾಗರ ತಂದೆ ಮುಂಗ್ಲಿಕ್ ಕುಣ್ಣೂರಕರ 28ವರ್ಷ,ವೃತ್ತಿ: ಟೈಲ್ಸ್ ಕೆಲಸ ಸಾ ನವಾಟಗಲ್ಲ, ಬೆಳಗಾವಿ
( ನಕಲ ನೋಟು ಮಾರಾಟಗಾರರರು )
5. ಶಬ್ಬಿರ್ @ ಅಂತೋನಿ ತಂದೆ ಇಸ್ಮಾಯಿಲ್ ಕುಟ್ಟ, 45ವರ್ಷ, ವೃತ್ತಿ: ವ್ಯವಹಾರ, ಸಾ|| ಡಿ.ಎಚ್.ಎ ಟೌನ್ಶೀಪ್, ದಾಂಡೇಲ
6. ಶಿವಾಜಿ ತಂದೆ ಶ್ರವಣ ಕಾಂಬಳೆ, 52ವರ್ಷ, ವೃತ್ತಿ: ಬಸನೇಸ್ ಸಾ|| ವನಶ್ರೀನಗರ, ದಾಂಡೇಲಿ ಇವರನ್ನು ದಸ್ತಗಿರಿ ಮಾಡಿ ಆಪಾದಿತರಿಂದ, 1) ೮೦೦/- ಮುಖ ಬೆಲೆಯ 4,50,000/- ರೂ ಮೂಲ ನೋಟುಗಳು
2) 500/- ಮುಖ ಬೆಲೆಯ 72,43,000/- ರೂ ನಕಲ ನೋಟುಗಳು 3) ಸ್ವಿಪ್ಟ್ ಡಿಸೈರ್ ಕಾರ್ ನಂ: ಕೆ.ಎ-36 ಎನ್-1100
4) ಪಿಗೋ ಕಾರ್ ನಂ: ಕೆ.ಎ-22 ಎಮ್.ಎ-3946 5) ನಕಲ ನೋಟು ತಯಾರಿಸಯಲು ಉಪಯೋಗಿಸಿದ ವಿವಿಧ ಉಪಕರಣಗಳು ಜಪ್ತಿ ಮಾಡಲಾಗಿದೆ.
Leave a Comment