ಹೊನ್ನಾವರ: ಕಳೆದ ಒಂದು ವರ್ಷದಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲರಿಗೂ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಅತಿಕ್ರಮಣದಾರ ಸಂಖ್ಯೆ ಹೆಚ್ಚಿದ್ದು ಸರ್ಕಾರದ ಯಾವ ಸೌಲಭ್ಯಗಳು ಇವರಿಗೆ ಮರೀಚಿಕೆಯಾಗಿದೆ. ಪ್ರತಿ ರಾಜಕೀಯ ಪಕ್ಷಗಳು ಈ ವರ್ಗವನ್ನು ಪ್ರತಿ ಚುನಾವಣೆಯಲ್ಲಿ ಹಕ್ಕುಪತ್ರದ ಭರವಸೆ ನೀಡುತ್ತಾ ಬಂದಿರುದು ಬಿಟ್ಟರೆ, ಇವರ ಬೇಡಿಕೆ ಶಾಶ್ವತವಾಗಿ ಈಡೇರಿಸುವ ಗೋಜಿಗೆ ಹೋಗಿಲ್ಲ. ಇಂದು ಕೊರೋನಾ ದಿಂದ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯನ್ನು ಕಾಣುತಿದ್ದೆವೆ ಇಂತಹ ಸಂದರ್ಭದಲ್ಲಾದರು ಸಮಾನತೆಯಿಂದ ಸಾರ್ವಜನಿಕ ನ್ಯಾಯ ಒದಗಿಸಿ ಅತಿಕ್ರಮಣದಾರರು ಹಾಗೂ ಗ್ರಾಮೀಣ ಭಾಗದವರ ಜೀವನದ ಬಗ್ಗೆ ಸರ್ಕಾರ ಯೋಚಿಸಬೇಕಿದೆ.
ಕೇಂದ್ರ ಸರ್ಕಾರ ಕೊರೋನಾ ಪ್ರಥಮ ಹಂತದಲ್ಲಿ ಇಪ್ಪತ್ತು ಲಕ್ಷ ಕೋಟಿ ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಕೊರೋನಾ ಬಜೆಟ್ ಘೋಷಣೆ ಮಾಡಿತ್ತು ಈ ಬಾರಿಯೂ ಸಹ ರಾಜ್ಯ ಸರ್ಕಾರವು 1200 ಕೋಟಿ ಬಿಡುಗಡೆ ಮಾಡಿದೆ ಆದರೆ ಹಳ್ಳಿಯಲ್ಲಿ ಬದುಕುತ್ತಿರುವ ನಿಜವಾದ ಕೂಲಿಗಳಿಗೆ BPL ಮತ್ತು ಅಂತ್ಯೊದಯ ಕಾರ್ಡ್ ಇದ್ದವರಿಗೆ 80%ಜನರಿಗೆ ಇದರಿಂದ ಪರಿಹಾರ ಸಿಗಲಿಲ್ಲ. ಸರ್ಕಾರದಿಂದ ಸಿಕ್ಕಿದ್ದು ಬರಿ ರೆಷನ್ ಮಾತ್ರ.ನಮ್ಮ ಜಿಲ್ಲೆಯಲ್ಲಿ ನಿಜವಾದ ಕೂಲಿ ಕಾರ್ಮಿಕ ಕೆಲಸ ಮಾಡ್ತಿದ್ದಾನೆ ಆದರೆ ಏಕೆರೆ ಗಟ್ಟಲೆ ಆಸ್ತಿ ಇದ್ದವರು ಯೊಜನೆ ಪಡೆದುಕೊಳ್ಳುತ್ತಿದ್ದಾರೆ.
ಇದರ ಬಗ್ಗೆ ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲಾ ಇಂತಹ ಸಮಸ್ಯೆಯಿಂದ ಬಡವರಿಗೆ ಅನ್ಯಾಯ ಆಗುತ್ತಿದ್ದು ,ಸಮಸ್ಯೆಗೆ ನೇರ ಹೊಣೆ ಸಂಬಂಧಿಸಿದ ಅಧಿಕಾರಿಗಳು ಎಂದರೆ ತಪ್ಪಾಗಲಾರದು.ಇಂತಹ ಸಂದರ್ಭಗಳಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸಮಾನತೆ ನೀಡಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ನಿಜವಾದ ಸೌಲಭ್ಯ ಶ್ರೀಮಂತರು ಹಾಗೂ ರಾಜಕಾರಣಿಗಳಿಗೆ ಸಿಗುತ್ತಿದೆ. ಗ್ರಾಮೀಣ ಭಾಗದವರಿಗೆ ಇಂದಿಗೂ ಸರ್ಕಾರದ ಯೋಜನೆ ಸಿಗುತ್ತಿಲ್ಲ.
ಹಳ್ಳಿಯವರಿಗೆ ಸಕಲ ಸೌಲಭ್ಯಗಳನ್ನು ಒದಗಿಸಬೇಕು ಜೊತೆಯಾಗಿ ಕೊರೋನಾ ಪ್ಯಾಕೇಜ್ ಪ್ರತಿಯೊಂದು ಕುಟುಂಬಕ್ಕೆ ಸಿಗುವಂತಾಗಬೇಕು. ಪ್ರತಿ ಬಿ.ಪಿಎಲ್ ಕಾರ್ಡುದಾರರಿಗೆ ಸರ್ಕಾರದಿಂದ ಕೊರೋನಾ ಪ್ಯಾಕೆಜ್ ಸಿಗದೆ ಇದ್ದವರಿಗೆ ಪ್ರತಿ ಕುಟುಂಬಕ್ಕೆ ಶೀಘ್ರವಾಗಿ 10 ಸಾವಿರ ಘೋಷಣೆ ಮಾಡುವಂತೆ ಸಾಮಾಜಿಕ ಹೋರಾಟಗಾರ ಗಿರೀಶ ನಾಯ್ಕ ಹಡಿಕಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
Leave a Comment