ಹೊನ್ನಾವರ; ಮಾಜಿ ಶಾಸಕ ಮಂಕಾಳು ವೈದ್ಯರ ಜನ್ಮದಿನದ ಅಂಗವಾಗಿ ತಾಲೂಕಿನ ಕುದ್ರಿಗಿಯ ಮಂಕಾಳ ವೈದ್ಯ ಅಭಿಮಾನಿ ಬಳಗದ ವತಿಯಿಂದ ಕೋವಿಡ್ 19 ಸಂದರ್ಭದಲ್ಲಿ ಜನತೆಯ ಸೇವೆ ನೀಡುವ ವೈದ್ಯಕೀಯ ಸಿಬ್ಬಂದಿಗಳಿಗೆ ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಪ್ರಾಥಮಿಕ ಆರೊಗ್ಯ ಕ್ರೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮೆಡಿಕಲ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ನಹುಶ್ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಉಲ್ಲಾಸ್ ನಾಯ್ಕ ಗ್ರಾ.ಪಂ. ಅಧ್ಯಕ್ಷೆ ಮಂಗಲಾ ನಾಯ್ಕ ಉಪಾಧ್ಯಕ್ಷ ಆದಂ ಅಬ್ದುಲ್ ಖಾನ್ ಸದಸ್ಯ ಮೊಹಮದ್ ಪೈಸಲ್, ಗಂಗೆ ಹಳ್ಳೆರ್ ಹಾಗೂ ಮಂಕಾಳ ವೈದ್ಯರ ಅಭಿಮಾನಿಗಳಾದ ನಾಗೇಶ್ ನಾಯ್ಕ ಗೋಪಾಲ ನಾಯ್ಕ ಪುರಂದರ ನಾಯ್ಕ ಉಪಸ್ಥಿತರಿದ್ದರು.
Leave a Comment