ಹೊನ್ನಾವರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೊನ್ನಾವರ ಇವರ ವತಿಯಿಂದ ತಾಲೂಕಿನ ಕಾಸರಕೋಡು,ಟೊಂಕ,ಹೊಸಪಟ್ಟಣ ಭಾಗದ ಅಶಕ್ತರಿಗೆ ಕೋವಿಡ್ ಸಂಕಷ್ಟದಲ್ಲಿರುವ ಗ್ರಾಮಾಭಿವೃದ್ದಿ ಯೋಜನೆ ಬಡ ಫಲಾನಿಭವಿ ಕುಟುಂಬಗಳಿಗೆ ಆಹಾರಕಿಟ್ ವಿತರಿಸಲಾಯಿತು.

ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಕ್ಷೇತ್ರದಿಂದ ಕೈಗೊಂಡ ಸೇವಾಕಾರ್ಯಗಳ ಬಗ್ಗೆ ವಿವರಿಸಿ ಸದಸ್ಯರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಜಿಲ್ಲಾ ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಸತೀಶ್ ಶೇಟ್ ಯೋಜನಾಧಿಕಾರಿ ವಾಸಂತಿ ವಲಯ ಮೇಲ್ವಿಚಾರಕ ನಾಗರಾಜ್.ಕೆ ಸ್ಥಳೀಯ ಸೇವಾಪ್ರತಿನಿಧಿಗಳಾದ ಸವಿತಾ ಗೌಡ ಜ್ಯೋತಿ, ಮಮತಾ, ಹಾಜರಿದ್ದರು
Leave a Comment