ಹೊನ್ನಾವರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದಿಂದ ಹೊನ್ನಾವರದಲ್ಲಿ ನಿರ್ಮಾಣವಾಗುತ್ತಿರುವ ನಾಮಧಾರಿ ಸಭಾಭವನ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿಗಳಾದ ಡಾ॥ಡಿ.ವೀರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ ₹10 ಲಕ್ಷ ಸಹಾಯಧನವನ್ನು ಬಿಡುಗಡೆಗೊಳಿಸಿದ್ದಾರೆ.

ಇದರ ಚೆಕ್ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್ ಶಾಸಕ ಸುನೀಲ್ ನಾಯ್ಕ ಹಾಗೂ ಸಮಿತಿ ಮುಖಂಡರಿಗೆ ಹಸ್ತಾಂತರಿಸಿದರು. ಶಾಸಕ ಸುನೀಲ್ ನಾಯ್ಕ ಮಾತನಾಡಿ ಧರ್ಮಸ್ಥಳ ಇಡೀ ವಿಶ್ವಕ್ಕೆ ಮಾದರಿ. ಹೆಗ್ಗಡೆಯವರ ಸೇವಾಕಾರ್ಯ ಈ ನಾಡಿನ ಅಭಿವ್ರದ್ಧಿಗೆ ದೊಡ್ಡ ಕೊಡುಗೆಯಾಗುದೆ. ಸಂಕಷ್ಟದ ಸಮಯದಲ್ಲಿ ಪ್ರತಿ ಬಾರಿ ನೆರವಾಗುವದರಲ್ಲಿ ಮುಂಚೂಣಿಯಲ್ಲಿರುತ್ತಾರೆ.
ರಾಜ್ಯದ ವಿವಿಧ ದೇವಾಲಯ ಹಾಗೂ ಸಮುದಾಯದ ಕಾರ್ಯಕ್ಕೆ ಯೋಜನೆ ನೆರವಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಶಂಕರ ಶೆಟ್ಟಿ , ಮಾಜಿ ಜಿ.ಪಂ.ಸದಸ್ಯ ದೀಪಕ ನಾಯ್ಕ, ಪ.ಪಂಅಧ್ಯಕ್ಷ ಶಿವರಾಜ ಮೇಸ್ತ,ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಯಕ್ಷ ಸತೀಶ್ ಶೇಟ್ ಯೋಜನೆಯ ವಾಸಂತಿ ಸುರೇಂದ್ರ,ನಾಗರಾಜ್ ಸಮಿತಿಯ ಅಧ್ಯಕ್ಷ ಸಿ.ಬಿ.ನಾಯ್ಕ ಹಾಗೂ ಸಮಿತಿಯ ಚಂದ್ರಶೇಖರ ಗೌಡ, ಹರಿಯಪ್ಪ ನಾಯ್ಕ ಹಾಜರಿದ್ದರು.
Leave a Comment