ಹೊನ್ನಾವರ ; ತಾಲೂಕಿನ ಕವಲಕ್ಕಿ ಪೆಟ್ರೂಲ್ ಬಂಕ್ ಎದುರು ರವಿವಾರ ಯುವ ಕಾಂಗ್ರೇಸ್ ವತಿಯಿಂದ ಪೆಟ್ರೂಲ್ ಡಿಸೇಲ್ ಹಾಗೂ ಅಗತ್ಯವಸ್ತು ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಜರುಗಿತು. ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿ ಧರಣಿ ನಡೆಸಿದರು. ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಮಾತನಾಡಿ ಜನರು ಸಂಕಷ್ಟದಲ್ಲಿರುವಾಗ ಪೆಟ್ರೂಲ್ ದರ ಏರಿಕೆ ಮಾಡುತ್ತಲ್ಲೆ ಇದ್ದಾರೆ.

ಅಲ್ಲದೇ ದಿನಸಿ ವಸ್ತುಗಳ ಬೆಲೆಯು ಏರುತ್ತಿದೆ. ಅಡುಗೆ ಎಣ್ಣೆ 75ರೂಪಾಯಿ ಇದ್ದದ್ದು 150ರ ಗಡಿ ದಾಟಿದೆ. ಜನತೆ ಸಂಕಷ್ಟದಲ್ಲಿದ್ದಾರೆ ಕೇವಲ ಸರ್ಕಾರ ಅಕ್ಕಿ ಮಾತ್ರ ನೀಡದೇ ದಿನಸಿ ವಸ್ತುಗಳನ್ನು ನೀಡುವ ಮೂಲಕ ನೆರವಿಗೆ ಧಾವಿಸಬೇಕು. ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿದರು. ಯೂತ್ ಕಾಂಗ್ರೇಸ್ ಅಧ್ಯಕ್ಷ ಸಂದೇಶ ಶೆಟ್ಟಿ ಮಾತನಾಡಿ ಪೆಟ್ರೂಲ್ ಡಿಸೇಲ್ ದರ ಏರಿರುದು ಬೈಕ್ ಕಾರು ಪ್ರಯಾಣಿಸುವರಿಗೆ ಮಾತ್ರವಲ್ಲದೇ ಸರಕು ಸಾಗಣಿ ವಾಹನಗಳಿಗೂ ಅನ್ವಯಿಸಲಿದೆ. ಇದರಿಂದ ದಿನಸಿ ಬೆಲೆಯು ಹೆಚ್ಚಳವಾಗುತ್ತಿದೆ. ಮುಂದಿನ ದಿನದಲ್ಲಿ ಮಧ್ಯಮ ವರ್ಗದವರ ಜೀವನ ಮತ್ತಷ್ಟು ಸಂಕಷ್ಟಕ್ಕಿಡಗುತ್ತಾರೆ.
ಸರ್ಕಾರ ಬೆಲೆ ಕಡಿಮೆ ಮಾಡದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಆರ್.ಕೆ.ಹೆಗಡೆ, ಕಾರ್ಯಕರ್ತರಾದ ಪರಮ ನಾಯ್ಕ, ಪ್ರಮೋದ ನಾಯ್ಕ, ಗಣೇಶ ಗೌಡ,ರಾಜು ನಾಯ್ಕ ಮುಗ್ವಾ, ಈಶ್ವರ ಮುಕ್ರಿ ಭಾಸ್ಕೇರಿ, ವಸಂತ ಶೆಟ್ಟಿ ಮತ್ತಿತರರು ಹಾಜರಿದ್ದರು.
Leave a Comment