• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ವಿಫಲ-ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

June 15, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಕರ್ಕಿಯಲ್ಲಿ ಪೆಟ್ರೋಲ್ ಬಂಕ್ ಎದುರು  ಕಾಂಗ್ರೆಸ್  ಹಾಗೂ ಕಿಸಾನ್ ಕಾಂಗ್ರೇಸ್ ವತಿಯಿಂದ ಪೆಟ್ರೂಲ್, ಡಿಸೇಲ್  ಹಾಗೂ ಅಗತ್ಯವಸ್ತು ಬೆಲೆ ಏರಿಕೆ ವಿರೋಧಿಸಿ ಸೋಮವಾರ ಪ್ರತಿಭಟನೆ ಜರುಗಿತು.
ಪೆಟ್ರೂಲ್ ಡಿಸೇಲ್  ಹಾಗೂ ಅಗತ್ಯವಸ್ತು ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿ ಪೆಟ್ರೊಲ್ ಬಂಕ್ ಎದರು ಧರಣಿ ನಡೆಸಿದರು.

IMG 20210614 WA0084


 ಕಿಸಾನ್ ಕಾಂಗ್ರೆಸ್ ತಾಲೂಕಾ ಘಟಕದ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಮಾತನಾಡಿ ಜನಸಾಮಾನ್ಯರ ಬದುಕು ಬೀದಿಗೆ ಬೀಳುವಂತಾಗಿದೆ. ಬಡವರ ಸಮಸ್ಯೆಗೆ ಸ್ಪಂದನೆ ಇಲ್ಲ, ಅಳಲು ಕೇಳುವವರಿಲ್ಲ .ಕೆಲಸವಿಲ್ಲದೆ ಕಾರ್ಮಿಕರ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ದೇಶದಾಧ್ಯಂತ ಕೋರೊನಾ ಹೆಮ್ಮಾರಿ ತಾಂಡವವಾಡುತ್ತಿದ್ದು, ಇಂತಹ ಕಠಿಣ ಸಂದರ್ಭದಲ್ಲೂ ಜನರ ಜೇಬಿಗೆ ಕತ್ತರಿ ಹಾಕಿ ಪೆಟ್ರೋಲ್, ಡಿಸೇಲ್, ಬೆಲೆಯನ್ನು ಮನಬಂದಂತೆ ಏರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ಬಂದಿದ್ದ ಅನ್ನಭಾಗ್ಯ ಯೋಜನೆ ಈ ಸಂದರ್ಭದಲ್ಲಿ ಜನರಿಗೆ ನೆರವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿಂದಿನ ಸರ್ಕಾರಗಳು ಜನರಿಗೆ  ಸ್ಪಂದಿಸುತ್ತಿತ್ತು.

ಆದರೆ ಈಗಿನ ಸರ್ಕಾರ ಜನರ ಕೂಗನ್ನು ಆಲಿಸುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ಘೋಷಣೆ ಮಾಡಿದ ಮೂರುಸಾವಿರ ರೂಪಾಯಿ ಹಣ ಹದಿನೈದು ದಿನ ಕಳೆದರು ಫಲಾನುಭವಿಗಳ ಖಾತೆಗೆ ಇನ್ನೂ  ಜಮಾ ಆಗಿಲ್ಲ .ಬಡಜನರ ಗುರುತಿಸಿ ಅಗತ್ಯ ದಿನಸಿ ಕಿಟ್ ಕೂಡ ನೀಡಿಲ್ಲ. ಇಂತಹ ಕೆಟ್ಟ ಸರ್ಕಾರ ಶೀಘ್ರವೇ ತೊಲಗಲಿ ಎಂದು  ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಕರ್ಕಿ ಗ್ರಾಮ ಪಂಚಾಯತ ಸದಸ್ಯ ಕಮಲಾಕರ ಮುಕ್ರಿ, ಪಟ್ಟಣ ಪಂಚಾಯತ ಮಾಜಿ ಸದಸ್ಯ ರವೀಂದ್ರ ನಾಯ್ಕ,ಕಿಸಾನ್ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ವಿನೋದ್  ನಾಯ್ಕಮಹೇಶ್ ಹೆಗಡೆ,ರಾಮಚಂದ್ರ ನಾಯ್ಕ,ಮಾದೇವ ನಾಯ್ಕ, ಹುಲಿಯಣ್ಣ ಗೌಡ, ಸುರೇಶ್ ಮೇಸ್ತ, ಮಾಬ್ಲೇಶ್ವರ ಮೇಸ್ತ,ರಾಮ  ನಾಯ್ಕ,ಶ್ರೀಪಾದ ನಾಯ್ಕ, ಜನಾರ್ಧನ ನಾಯ್ಕ,ಗಜಾನನ ನಾಯ್ಕ, ನವೀನ್ ನಾಯ್ಕ ಸೇರಿದಂತೆ ಕಾಂಗ್ರೆಸ ಪಕ್ಷದ ಹಾಗೂ ಕಿಸಾನ್ ಜಿಲ್ಲಾ,ತಾಲೂಕಾ ಘಟಕದ  ಪ್ರಮುಖರು ಭಾಗವಹಿಸಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಅಗತ್ಯವಸ್ತು ಬೆಲೆ ನಿಯಂತ್ರಣ, ಕಟ್ಟಡ ಕಾರ್ಮಿಕರಿಗೆ ಘೋಷಣೆ, ಕಿಸಾನ್ ಕಾಂಗ್ರೆಸ್, ತಾಲೂಕಾ ಘಟಕದ ಅಧ್ಯಕ್ಷ, ದೇಶದಾಧ್ಯಂತ ಕೋರೊನಾ ಹೆಮ್ಮಾರಿ ತಾಂಡವ, ಪೆಟ್ರೂಲ್ ಡಿಸೇಲ್

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,238 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...