ವಿವಿಧ ಬೇಡಿಕೆ ಈಡೇರಿಸುವಂತೆ ಸಿಐಟಿಯು ಹಾಗೂ ಎಸ್ಐಟಿಯು ನೇತ್ರತ್ವದಲ್ಲಿ ಹೊನ್ನಾವರದಲ್ಲಿ ತಹಶೀಲ್ದಾರ ಮೂಲಕ ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಕೋರೋನಾ ಸಂಕಷ್ಟದ ಸಮಯದಲ್ಲಿ ಮೆಡಿಕಲ್ ಮಾಪಿಯಾ ಮೂಲಕ ಬೆಡ್ ಸೇರಿದಂತೆ ವಿವಿಧ ಹಗಹರಣ ನಡೆದಿದ್ದು ರಾಜ್ಯ ಸರ್ಕಾರ ತಡೆಯಲು ವಿಫಲವಾಗಿದೆ.

ಇ ಎಲ್ಲ ಪ್ರಕರಣವನ್ನು ನ್ಯಾಯಂಗ ತನಿಖೆ ಮಾಡಬೇಕು. ಕೋವಿಡ್ ಪರಿಹಾರವಾಗಿ ಅಕ್ಕಿ ಜೊತೆ ದಿನಸಿ ನೀಡಬೇಕು. ಪ್ರತಿ ಕುಟುಂಬಕ್ಕೆ ೧೦ ಕೆ.ಜಿ. ಅಕ್ಕಿ ನೀಡಬೇಕು. ಹೂ ಹಣ್ಣು ತರಕಾರಿ ಬೆಳೆ ಲಾಕ್ ಡೌನ ನಿಂದ ನಾಶ ಹೊಂದಿದ್ದು ಪರಿಹಾರ ಹೆಚ್ಚಿಸಬೇಕು. ಕೋವಿಡ್ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಪರಿಹಾರ ನೀಡಬೇಕು. ವಿದ್ಯುತ್ ದರ ಹೆಚ್ಚಳ ವಾಪಸ್ಸು ಪಡೆದು ಅಗತ್ಯವಸ್ತುಗಳ ಬೆಲೆ ನಿಯಂತ್ರಿಸುವಂತೆ ಮನವಿ ಸಲ್ಲಿಸಿದರು.ಮಿನಿವಿಧಾನಸೌದದ ಎದುರು ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಸಿ.ಐಟಿ.ಯು ಜಿಲ್ಲಾ ಕಾರ್ಯದರ್ಶಿ ತಿಲಕ ಗೌಡ ರೈತಸಂಘದ ಕಾರ್ಯದರ್ಶಿ ತಿಮ್ಮಪ್ಪ ಗೌಡ ಹಾಜರಿದ್ದರು.
Leave a Comment