ಹೊನ್ನಾವರ; ಕೋವಿಡ್ ಸಂಕಷ್ಟದಲ್ಲಿ ಹಲವರ ಬದುಕು ಚಿಂತಾಜನಕವಾಗಿದೆ. ತುತ್ತು ಊಟಕ್ಕಾಗಿಯೂ ಹಲವರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಿರ್ಗತಿಕರಾಗಿ ಬೀದಿಯಲ್ಲಿ ಸುತ್ತುವ ಬಿಕ್ಷುಕರಿಗೆ, ಅವರಿವರಲ್ಲಿ ಕೈ ಚಾಚುವ ಮೂಲಕವೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ತೃತೀಯ ಲಿಂಗಿಗಳಿಗೆ, ತಮ್ಮ ಜೀವದ ಹಂಗು ತೊರೆದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡುತ್ತಿರುವ ಅಂಬುಲೆನ್ಸ್ ಚಾಲಕರಿಗೆ, ತಾಲೂಕಾಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ, ಕೊರೊನ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ, ಕೊರೊನಾ ಸಂಬಂಧಿತ ಲಾಕ್‍ಡೌನ್ ಜಾರಿಯಾದ ದಿನದಿಂದ ಎರಡು ಹೊತ್ತು ಊಟ ನೀಡುವ ಮೂಲಕ ಭಾರತೀಯ ಜನತಾ ಪಾರ್ಟಿ ಹೊನ್ನಾವರ ಮಂಡಲ ಸದ್ದಿರದ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಇಡೀ ದೇಶವೇ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕು ಹೊರಬರಲಾರದೇ ಚಡಪಡಿಸುತ್ತಿರುವ ಸಮಯದಲ್ಲು ಆಳುವ ಸರ್ಕಾರಗಳು ಪರಿಸ್ಥಿತಿ ಕೈ ಮೀರದಂತೆ ಸೋಂಕನ್ನು ನಿಯಂತ್ರಿಸಲು ಲಾಕ್‍ಡೌನ್ ಅಸ್ತ್ರವನ್ನು ಪ್ರಯೋಗಿಸಿದ ಕಾರಣ ಹೊಟೇಲ್, ಅನ್ನಛತ್ರ, ಅಂಗಡಿಮುಂಗಟ್ಟುಗಳು ಬಾಗಿಲು ಮುಚ್ಚಿದ ಸಂದಿಗ್ಧ ಸ್ಥಿತಿಯಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವವರ ಸಂಖ್ಯೆಯೂ ದೊಡ್ಡದಿದೆ. ಅಂತವರನ್ನು ಗುರುತಿಸಿ ಅವರ ಹಸಿವನ್ನು ತಣಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹೊನ್ನಾವರ ಬಿಜೆಪಿಯ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ರಾಜಕೀಯದಿಂದ ಬಿಡುವು ಮಾಡಿಕೊಂಡು ಮಾನವೀಯ ಸೇವೆಯಲ್ಲಿ ತೊಡಗಿರುವುದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮನೆ ಇದ್ದವರು, ಆಸ್ಥಿ ಇದ್ದವರು ಸ್ಟೇ ಹೋಂ ಸ್ಟೇ ಸೇಪ್ ಅಂದುಕೊಂಡು ಈಗ ಜೀವ ಉಳಿಸಿಕೊಂಡರೆ ಮುಂದೆ ಜೀವನ ಇದೆ ಎಂದು ಆಶಾದಾಯಕವಾಗಿ ಯೋಚಿಸಿ ಸುಮ್ಮನಿರಬಹುದಾದರೂ ದಿಕ್ಕು ದೆಸೆಯಿಲ್ಲದ ನಿರ್ಗತಿಕರು, ಅಂದಿನ ಅನ್ನವನ್ನು ಅಂದೇ ಸಂಪಾದಿಸಿಕೊಳ್ಳಬೇಕಾದ ದೀನ ದುರ್ಬಲರು, ಮನೆಯಿಂದ ಹೊರಗೆ ಕಾಲಿಡಲು ಭಯವಾದರೂ ಕರ್ತವ್ಯಕ್ಕೆ ಹಾಜರಾಗಲೇ ಬೇಕಾದ ಅನಿವಾರ್ಯತೆಯನ್ನು ಹೊಂದಿರುವ ಆರೋಗ್ಯ ಕಾರ್ಯಕರ್ತರು, ಅಂಬುಲೆನ್ಸ್ ಚಾಲಕರು ಮುಂತಾದವರು ಹಸಿವೆಂಬ ಹೆಬ್ಬಾವು ಬಸಿರ ಬಂದು ಹೊಕ್ಕದಂತೆ ತಡೆಯುವುದೇ ದುಸ್ಸಾಹಸವಾಗಿ ಮಾರ್ಪಟ್ಟಿದೆ. ಅಂತವರ ಪಾಲಿಗೆ ನೆರವಿನ ಹಸ್ತ ಚಾಚುತ್ತಿರವ ಹೊನ್ನಾವರ ಬಿಜೆಪಿ ಮಂಡಲ ಕೇವಲ 30 ಜನರಿಂದ ಪ್ರಾರಂಭಿಸಿದ ಕಳಕಳಿ ಇಂದು ಸುಮಾರು 80 ಮಂದಿಗೆ ಎರಡು ಹೊತ್ತಿನ ಊಟ ನೀಡುವ ಮೂಲಕ ಅನ್ನದಾನಿಗಳಾಗಿದ್ದಾರೆ.ಕಳೆದ ವರ್ಷದ ಕೊರೋನಾ ಸಮಯದಲ್ಲಿ ೩ ಲಕ್ಷಕ್ಕೂ ಅಧಿಕ ಮೊತ್ದ ಮೆಡಿಸಿನ್ ಮನೆ ಬಾಗಿಲಿಗೆ ತಲುಪಿಸಿದ ಕಾರ್ಯಕರ್ತರು ೧ ಲಕ್ಷ ಮೊತ್ತದಷ್ಟು ಹಣವನ್ನು ಬಡವರಿಂದ ಪಡೆಯದೇ ಮಾನವಿಯತೆ ಮೆರೆದಿದ್ದರು. ಹತ್ತಕ್ಕೂ ಅಧಿಕ ಜನರು ಮೃತಪಟ್ಟಾಗ ಅವರ ಅಂತ್ಯಕ್ರೀಯೆ ನಡೆಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಹಸಿದವರಿಗೆ ಅನ್ನ ನೀಡುವ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರೆ. ಮೂಡಗಣಪತಿ ದೇವಾಲಯದ ಆಡಳಿತ ಕಮಿಟಿಯ ಗಿರೀಶ ತೆಲಂಗ, ಪಟ್ಟಣಪಂಚಾಯತ್ ಸದಸ್ಯ ವಿಜು ಕಾಮತ್, ಮಂಡಲದ ಉಪಾಧ್ಯಕ್ಷ ದತ್ತಾತ್ರೇಯ ಮೇಸ್ತ, ಸಾಮಾಜಿಕ ಕಾರ್ಯಕರ್ತ ರಾಘು ಪೈ, ಉದಯ ಪ್ರಭು, ನವೀನ್, ಸುಧೀರ್, ವಿನೋದ ಮುಂತಾದವರು ಕೈಜೋಡಿಸಿದ್ದಾರೆ. ಈ ಮಹತ್ಕಾರ್ಯಕ್ಕೆ ಹಲವು ದಾನಿಗಳು ವಸ್ತು ರೂಪದಲ್ಲಿ ಸಹಾಯ ಮಾಡಿದ್ದಾರೆ. ಪಟ್ಟಣದ ಶ್ರೀ ಮೂಡಗಣಪತಿ ದೇವಾಲಯದ ಆಡಳಿತ ಮಂಡಳಿಯವರು ಊಟ ತಯಾರಿಸಲು ಪಾಕಶಾಲೆಯನ್ನು ಮತ್ತು ಪಾತ್ರೆಗಳನ್ನು ಉಚಿತವಾಗಿ ನೀಡಿ ಸಹಕಾರ ನೀಡುತ್ತಿದ್ದಾರೆ. ಇನ್ನೂ ಅನೇಕ ಕಾರ್ಯಕರ್ತ ಬಂಧುಗಳು ಪ್ರತ್ಯಕ್ಷ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ ಎಂದು ನೆನೆಯುತ್ತಾರೆ ಅವರಿಗೆ ಅಭಿನಂದಿಸಿದ್ದಾರೆ.
Leave a Comment