ಯಲ್ಲಾಪುರ : ಪತಂಜಲಿ ಯೋಗ ಸಮಿತಿ ಹಾಗೂ ತಾಲೂಕಾ ಭಾಜಪ ಘಟಕ ಇವರ ಆಶ್ರಯದಲ್ಲಿ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ೭ನೇ ವಿಶ್ವ ಯೋಗ ದಿನಾಚರಣೆಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಕೇಂದ್ರೀಕರಣ ಆಯೋಗದ ಉಪಾಧ್ಯಕ್ಷ ಪ್ರಮೋದ ಉದ್ಘಾಟಿಸಿ ಸರಳವಾಗಿ ಆಚರಿಸಲಾಯಿತು.
ನಂತರ ನಡೆದ ಯೋಗ ಪ್ರಾತ್ಯಕ್ಷಿಕೆಯನ್ನು ಯೋಗ ಶಿಕ್ಷಕರಾದ ಕನಕಪ್ಪ ಹಾಗೂ ನಾಗೇಶ್ ರಾಯ್ಕರ್ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ನಿರ್ದೇಶನದಂತೆ ನೀಡಲ್ಪಟ್ಟ ಆಸನ ಪ್ರಾಣಾಯಾಮ ಧ್ಯಾನ ಇತ್ಯಾದಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಯೋಗ ಶಿಕ್ಷಕ ದಿವಾಕರ ಮರಾಠಿ ನಿರ್ವಹಿಸಿದರು.
ಹಾಗೂ ಗೂಗಲ್ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರೂ ಮನೆಗಳಲ್ಲಿಯೋಗ ಮಾಡಲು ಅನುಕೂಲ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ತಾಲೂಕಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ .ಕೆ. ಭಟ್ಟ, ಶೀಗೆಪಾಲ್, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾವ್ಕರ್, ಯುವ ಮೋರ್ಚಾ,ಜಿಲ್ಲಾ ಉಪಾಧ್ಯಕ್ಷ ಸೋಮೇಶ್ವರ ನಾಯಕ್ , ತಾಲೂಕ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಯಲ್ಲಾಪುರಕರ ,ಅಲ್ಪ ಸಂಖ್ಯಾತ ಮೊರ್ಚಾ ಅಧ್ಯಕ್ಷ ಬಾಬಾ ಅಲ್ಲನ ಸಾಬ್,ಪಟ್ಟಣ ಪಂಚಾಯತ ಸದಸ್ಯ ಆದಿತ್ಯ ಗುಡಿಗಾರ್, ಹಿರಿಯ ವಕೀಲರಾದ ಜಿ.ಎಸ್ ಭಟ್ಟ ಹಳವಳ್ಳಿ,ಮಹಿಳಾ ಪತಂಜಲಿ ಸಮಿತಿ ಯ ಶೈಲಶ್ರೀ ಭಟ್ಟ ಮುಂತಾದವರು ಇದ್ದರು.
.
Leave a Comment