ಭಟ್ಕಳ: ಅಕ್ರಮವಾಗಿ ಆಟೋವೊಂದರಲ್ಲಿ 70 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ
ಇಲ್ಲಿನ ಡೊಂಗರಪಳ್ಳಿ ಕ್ರಾಸ್ ಸಮೀಪ ಆಟೋ ತಡೆದು ಓರ್ವ ಆರೋಪಿಯನ್ನು ಬಂದಿಸಿದ ಘಟನೆ ಬುಧವಾರ ನಡೆದಿದೆ
ಆರೋಪಿಗಳಾದ ಇಬ್ರಾಹಿಂ ಖಲೀಲ್ ಇಲ್ಲಿನ ಸಿದ್ದಿಕಿ ಸ್ಟ್ರೀಟ್ ನಿವಾಸಿ ಎಂದು ತಿಳಿದು ಬಂದಿದೆ.
ಈತ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರನ್ನು ವದೆ ಮಾಡಿ ಸುಮಾರು 14 ಸಾವಿರ ಮೌಲ್ಯದ 70 ಕೆಜಿ ಆಗುವಷ್ಟು ಮಾಂಸವನ್ನು ತನ್ನ ಆಟೋದಲ್ಲಿ ತುಂಬಿಕೊಂಡು ಸಾಗಾಟ ಮಾಡುವಾಗ ತಾಲೂಕಿನ ಡೊಂಗರಪಳ್ಳಿ ಸಮೀಪ ಆಟೋ ಸಮೇತ ಆರೋಪಿಯನ್ನು ಬಂಧಿಸಲಾಗಿದೆ.
ಈ ಕುರಿತು ಭಟ್ಕಳ ನಗರಠಾಣೆ ಪಿ.ಎಸ್.ಐ ಹೆಚ್.ಬಿ ಕುಡಗುಂಟಿ ಪ್ರಕರಣ ಠಾಣೆಯಲ್ಲಿ ದಾಖಲಿಸಿದ್ದಾರೆ.
Leave a Comment