
ಯಲ್ಲಾಪುರ: ದೇಶವೇ ಕೋವಿಡ್ ಮಹಾಮಾರಿಯಿಂದ ತತ್ತರಿಸಿದೆ.ಆದರೂ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಬಾರದು,ಈದಿಶೆಯಲಿ ಸರಕಾರ ಕಾಲೇಜು ವಿದ್ಯಾರ್ಥಿಗಳಿಗೆ ೧ಲಕ್ಷ ೫೫ ಸಾವಿರ ಉಚಿತ ಟ್ಯಾಬ್ಲೆಟ್ ವಿತರಣೆ ಸೇರಿದಂತೆ ಹತ್ತು ಹಲವು ಯೋಜನೆಗಳೊಂದಿಗೆ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಕೇಂದ್ರದಲ್ಲಿ ಉಚಿತ ಟ್ಯಾಬ್ಲೆಟ್ ವಿತರಣೆ ಹಾಗೂ ಐ.ಸಿ.ಟಿ ತರಗತಿ ಉದ್ಘಾಟಿಸಿ ಮಾತನಾಡಿದರು.
ಕಟ್ಟಕಡೆಯ ಕಾರ್ಮಿಕರ ಮಕ್ಕಳಿಗೂ ಸೇರಿದಂತೆ ಯಾವದೇ ಜಾತಿ ಭೇದವಿಲ್ಲದೇ ಒಟ್ಟು ೪೩೦ ಸರಕಾರಿ ಕಾಲೇಜು,೧೬ ಸರಕಾರಿ ಇಂಜಿನಿಯರಿAಗ,೨೫೦೦ ಪ್ರಥಮದರ್ಜೇ ಕಾಲೇಜುಗಳ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಲಾಗುತ್ತಿದೆ. ಸರಕಾರದ ಉತ್ಪನ್ನದಲ್ಲಿಯ ಶೇ೧೩ ರಷ್ಟು ಮಕ್ಕಳಿಗಾಗಿ ಮಾಡಲಾಗುತ್ತಿದೆ. ಆದರೆ ಅದನ್ನು ಖರ್ಚು ಅಂತಾ ಪರಿಗಣಿಸದೇ ಭವ್ಯ ಭಾರತದ ಯುವಜನಾಂಗದ ರಕ್ಷಣೆ ದೇಶಕ್ಕೆ ನೀಡುವ ಕೊಡುಗೆಎಂದು ಭಾವಿಸಲಾಗುವದು
ಎಂದರು.
ತಹಶೀಲ್ದಾರ ಶ್ರೀಕೃಷ್ಣ ಕಾಮಕರ್, ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆ ಮಾತನಾಡಿದರು. ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾದಾಸ , ಉಪಾದ್ಯಕ್ಷೆ ಶ್ಯಾಮಿಲಿ ಪಾಠಣಕರ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲ ಕೃಷ್ಣ ಗಾಂವಕರ,ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ , ಮುಂತಾದವರು ವೇದಿಕೆಯಲ್ಲಿದ್ದರು.ವಿದ್ಯಾರ್ಥಿನಿ ರಕ್ಷಿತಾ ಕೋಟೆಮನೆ ಪ್ರಾರ್ಥಿಸಿದಳು.ಉಪನ್ಯಾಸಕಿಸುರೇಖಾ ತಡವಲ ನಿರ್ವಹಿಸಿದರು. ಐ.ಟಿ ಸಂಚಾಲಕ ಡಿ.ಜಿ ತಾಪಸ್ ಸ್ವಾಗತಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಐ.ಸಿ.ಟಿ ತರಗತಿ ಉದ್ಘಾಟಿಸಿದರು
Leave a Comment