• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇಂಡಿಯಾ ಬುಕ್ ,ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೆರ್ಪಡೆಯಾದ ಪ್ರದೀಪ ನಾಯ್ಕನ ಕಲೆ

June 29, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ ಮಂಜುನಾಥ್ ನಾಯ್ಕ.ಪದವಿಯನ್ನು ಎಸ್ ಡಿ ಎಮ್ ಪದವಿ ಕಾಲೇಜಿನಲ್ಲಿ ಪೂರ್ಣಗೊಳಿಸಿ  ಪ್ರಸ್ತುತ ಬಿ ಎಡ್ ಶಿಕ್ಷಣ ವನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ್ ಕಾರವಾರದಲ್ಲಿ ವ್ಯಾಸಂಗದಲ್ಲಿದ್ದಾರೆ.

918884396734 status d035e7f65a2d4d8292bc00e1d010d926

join our group

ಪ್ರದೀಪ್ ಗೆ ಚಾಕ್ ಆರ್ಟ್ ಎಂದರೆ ಏನೋ ಖುಷಿ ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ  ಕೇವಲ 2 ವರ್ಷಗಳಿಂದ ಈ ಹವ್ಯಾಸ  ಶುರುವಾಗಿ ಮೊದ ಮೊದಲು ಇಂಗ್ಲಿಷ್ ನ ಅಕ್ಷರ ಕೆತ್ತುವ ಅಭ್ಯಾಸ ಮಾಡುತ್ತಾ ಹಾಗೆ ಕೆಲ ದಿನಗಳ ನಂತರ  ತನ್ನ ಗೆಳೆಯರ ಹೆಸರು ಹಾಗೆ ಭಗತ್ ಸಿಂಗ್,ಬುದ್ಧ, ಐಪಿಎಲ್ ಟವರ್ , ಗಾಂಧೀಜಿ  ಮುಂತಾದವುಗಳನ್ನು ಮಾಡುತ್ತಾ ಆ ಕಲೆಯಲ್ಲಿ ಖುಷಿಯನ್ನು ಕಂಡ. ಹದಿನೇಳು ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಯನ್ನು  ಮತ್ತು ಒಂದು  ಚಾಕ್ ಪೀಸ್ ನಲ್ಲಿ ರವೀಂದ್ರನಾಥ್ ಠಾಗೋರ್ ಅವರ ರಚಿಸಿದ ರಾಷ್ಟ್ರಗೀತೆ ಹೆಸರನ್ನು ಕೇವಲ 18 ತಾಸುಗಳ ಕಾಲ ಕೆತ್ತಿ ಅದನ್ನು  ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳುಹಿಸಿದ. ಅವರು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ   ಪ್ರದೀಪ್ ಹೆಸರನ್ನು ದಾಖಲಿಸಿ ಕೊಂಡಿದ್ದಾರೆ. 


ಈ ಕುರಿತು ಚಾಕ್ ಪೀಸ್ ಆರ್ಟಿಸ್ಟ್  ಪ್ರದೀಪ್  ಮಾತನಾಡಿ  ಕಾಲೇಜಿನ ರಜಾ ಅವಧಿಯಲ್ಲಿ ಅದರಲ್ಲೂ ತೌಕ್ತೆ ಚಂಡಮಾರುತದ ಸಮಯದಲ್ಲಿ ಆನ್ಲೈನ್ ಕ್ಲಾಸ್ ಇರಲ್ಲಿಲ್ಲ. ಇನ್ನೇನಾದರೂ ಮಾಡಬೇಕು ಎನ್ನುವ ಕುತೂಹಲವಿತ್ತು.   ಹಾಗೆ  ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್  ನ ಸಾಧಕರನ್ನು ನೋಡಿ ನಾನು ಏನಾದರೂ ಮಾಡಬೇಕು ಎಂದು ಈ   ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಬರೆದು ಸಾಧನೆ ಮಾಡಿದೆ ಎಂದರು.

IMG 20210626 WA0041


 ಪ್ರದೀಪ್   ಸಾಧನೆ ಇಷ್ಟು ಮಾತ್ರವಲ್ಲ ಸಂಗೀತ, ತಬಲಾ , ಚಿತ್ರಕಲೆಯಲ್ಲಿ  ತನ್ನನ್ನು ತೊಡಗಿಸಿಕೊಂಡಿದ್ದಾನೆ. ಚಿತ್ರಕಲೆ ಮತ್ತು ಸಂಗೀತ ಬಾಲ್ಯದಿಂದ ಮಾಡುತ್ತಾ ಬಂದಿದ್ದು ಸಂಗೀತವನ್ನು ಹೊನ್ನಾವರದ  ಎಸ್ ಡಿ ಎಮ್ ಕಾಲೇಜಿನಲ್ಲಿ ಸತತ ಮೂರುವರ್ಷದ ಚಾಂಪಿಯನ್ ಶಿಪ್ ನಲ್ಲಿ  ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾನೆ.ಹಾಗೆ ಚಿತ್ರಕಲೆಯಲ್ಲಿ  ತನ್ನ ಗೆಳೆಯರ ಚಿತ್ರ ಮತ್ತು ಕಲಿಸಿದ ಗುರುಗಳ ಚಿತ್ರ  ಮತ್ತು ಫಿಲ್ಮ್ ಆಕ್ಟರ್ ಚಿತ್ರ  ಮತ್ತು ಅನೇಕ ಚಿತ್ರಗಳನ್ನು ಬಿಡಿಸುತ್ತಾ ಬಿಡುವಿನ ಸಮಯವನ್ನು ಎಲ್ಲಾ ಕಲೆಯಲ್ಲಿ ತೊಡಗಿಸಿ ಕೊಂಡಿದ್ದಾನೆ.

ಇತನ ಕಲೆಗೆ ಗೆಳೆಯರು ಕಲಾನಿಧಿ ಪ್ರದೀಪ ಎಂದು ಹೆಸರನ್ನು ನೀಡಿದ್ದು ಪ್ರದೀಪ್ ಅವರಿಗೆ ತುಂಬಾ ಖುಷಿಯನ್ನು ತಂದಿದೆ.ಹಾಗೆ ಮುಂದಿನ ದಿನಗಳಲ್ಲಿ ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕೆನ್ನುವ ಆಸೆ ಇದೆ..ಹಾಗೆ ನನ್ನ ಈ ಸಾಧನೆಗೆ ತಂದೆ ಮಂಜುನಾಥ ನಾಯ್ಕ್ ತಾಯಿ ಚಂದ್ರಕಲಾ ಮತ್ತು ಕುಟುಂಬದವರು, ನನ್ನ ಗುರುಗಳು ಮತ್ತು ನನ್ನ ಕಾಲೇಜಿನ ಪ್ರಾಚಾರ್ಯರು ಮತ್ತು ಗೆಳೆಯರು ಶುಭಾಶಯವನ್ನು ಕೋರಿ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಪ್ರದೀಪ್ ಅನಿಸಿಕೆ ಹಂಚಿಕೊಂಡರು.

https://canarabuzz.com/2021/06/29/%e0%b2%b5%e0%b2%bf%e0%b2%b5%e0%b2%be%e0%b2%b9%e0%b2%bf%e0%b2%a4-%e0%b2%af%e0%b3%81%e0%b2%b5%e0%b2%a4%e0%b2%bf%e0%b2%af-%e0%b2%ae%e0%b3%87%e0%b2%b2%e0%b3%86-%e0%b2%b2%e0%b3%88%e0%b2%82%e0%b2%97/

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Trending, ಸಾಧನೆ Tagged With: ಆನ್ಲೈನ್ ಕ್ಲಾಸ್, ಇಂಗ್ಲಿಷ್ ನ ಅಕ್ಷರ ಕೆತ್ತುವ ಅಭ್ಯಾಸ, ಇಂಡಿಯಾ ಬುಕ್, ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ತೌಕ್ತೆ ಚಂಡಮಾರುತದ ಸಮಯದಲ್ಲಿ, ಶಿವಾಜಿ ಶಿಕ್ಷಣ ಮಹಾವಿದ್ಯಾಲ, ಹದಿನೇಳು ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,168 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...