
yellapur news ; join our group
ಯಲ್ಲಾಪುರ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ಡಾ.ದೀಪಕ ಭಟ್ ಅವರು ಮಹಿಳೆಯೊಬ್ಬರ ಹೊಟ್ಟೆಯಲ್ಲಿನ ಮಗು ೪.೮ ಕೆ.ಜಿ ತೂಕವಿದ್ದರೂ ಸಹ ಸಹಜ ಹೆರಿಗೆ ಮಾಡಿಸಿರುವದು ವಿಶೇಷವಾಗಿದೆ. ತಾಲೂಕಾ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಮಂಗಳವಾರ ರಾತ್ರಿ ಧಾರವಾಡದ ಪ್ರೀತಿ ಪ್ರಭು (೨೭) ಎಂಬ ಮಹಿಳೆ ಯಾವದೇ ಸಮಸ್ಯೆಯಾಗದೇ ಸಹಜ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಸಿಸೇರಿಯನ ಹೆರಿಗೆ ಆಗಲಿದೆ ಎಂದಿದ್ದರು ಅದಕ್ಕಾಗಿ ಇವರ ಕುಟುಂಬದವರು ಯಲ್ಲಾಪುರದ ಆಸ್ಪತ್ರೆಗೆ ಕರೆತಂದು ಹೆರಿಗೆ ಮಾಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಲ್ಲಿ ಮಗು ಎಷ್ಟೇ ಕಡಿಮೆ ತೂಕವಿದ್ದರೂ ಸಹಜ ಹೆರಿಗೆ ಎಂಬುದು ಅಪರೂಪವೆಂಬAತಾಗಿ ಸಿಸೇರಿಯನ್ ಹೆರಿಗೆ ಸಾಮಾನ್ಯವೆಂಬಂತಾಗಿರುವ ಪರಿಸ್ಥಿತಿಯಲ್ಲಿ ಯಲ್ಲಾಪುರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ದೀಪಕ ಭಟ್‌ರವರು ನೂರಾರು ಮಹಿಳೆಯರಿಗೆ ಸಹಜ ಹೆರಿಗೆ ಮಾಡಿಸುವದರ ಮೂಲಕ ತಾಯಿ ಮಗುವಿನ ಜೀವ ಉಳಿಸಿ ಅವರ ಪಾಲಿನಆಪದ್ಭಾಂಧವರಾಗಿದ್ದಾರೆ. ಸಾಮಾನ್ಯವಾಗಿ ದೇಶದಲ್ಲಿ ಅತಿಹೆಚ್ಚು ಎಂದರೆ ೨.೫ರಿಂದ೨.೯ ಕೆಜಿ ತೂಕ ದ ಮಕ್ಕಳು ಸಹಜ ಹೆರಿಗೆಯಲ್ಲಿ ಜನಿಸುವದು ಸಾಮಾನ್ಯ.

yellapur news ; join our group
ಕಡಿಮೆ ಅಥವಾ ಅತಿ ತೂಕದ ಮಗುವಿಗೆ ಸಿಸೇರಿಯನ್ ಅನಿವಾರ್ಯ.ಆದರೆ೪.೮ಕೆಜಿತೂಕವಿರುವ ೫೪ ಸೆ.ಮೀಉದ್ದವಿರುವ ಮಗು ವಿದ್ದರೂ ಸಹಜ ಹೆರಿಗೆ ಮಾಡಿಸಿ ರುವ ಡಾ. ದೀಪಕ್ ಭಟ್ ರವರ ಸಾರ್ಥಕ ಕಾರ್ಯ ದಿಂದ ತಾಯಿಯ ಮೊಗದಲ್ಲಿ ಸಂತಸ ಹೆಚ್ಚಿಸಿದ್ದು ಆರೋಗ್ಯವಾಗಿದ್ದಾರೆ.ಇಷ್ಟೊಂದು ತೂಕವಿರುವ ಮಗುವಿನ ಜನನಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಮ್ಯಾಕ್ರೋಸೋಮಿಯಾ ಎಂದು ಹೇಳಲಾಗುತ್ತದೆ ಎಂದು ವೈದ್ಯರು ತಿಳಿಸಿದರು. ನರ್ಸಗಳಾದ ಲತಾ ಶೆಟ್ಟಿ,ಸೀಮಾ,ಇಂದಿರಾ ಹಾಗೂ ಮೇರಿ ಸಹಕರಿಸಿದ್ದರು.ವೈದ್ಯರ ದಿನಾಚರಣೆಯ ಸಂಧರ್ಭದಲ್ಲಿ ಇವರ ಸೇವೆ ಸ್ಮರಣಿಯ ವಾಗಿದೆ.
Leave a Comment