ಅನಿನ ಸೋರಿಕೆಯಿಂದಾಗಿ ಸಾಗರ ಗರ್ಭದಲ್ಲಿ ಬೆಂಕಿ ಮೆಕ್ಸಿಕೋ ಕೊಲ್ಲಿಯಲ್ಲಿ ಸಮುದ್ರ ಗರ್ಭದಿಂದ ಬೆಂಕಿ ಉರಿದು ಹೊತ್ತಿರುವ ರುದ್ರರಮಣೀಯ ದೃಶ್ಯ ಜಗತ್ತಿನ ಗಮನ ಸೆಳೆದಿದೆ.
ಮೆಕ್ಸಿಕೋದ ಯುಕಾಟನ್ ಎಂಬ ಕರಾವಳಿ ಪ್ರದೇಶದಲ್ಲಿ ಸಮುದ್ರದಾಳದಲ್ಲಿ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿ ಕೊಂಡಿದೆ ಎಂದು ತೈಲ ಸಂಸ್ಥೆ ಪೆಮೆಕ್ಸ್ ತಿಳಿಸಿದೆ ಹಸಿರು ಮಿಶ್ರಿತ ನೀಲಿ ಬಣ್ಣದ ಸಾಗರದ ನೀರಿನ ನಡುವೆ ಲಾವರಸ ಉಕ್ಕುತ್ತಿರುವಂತೆ ತೋರುತ್ತಿರುವ ದೃಶ್ಯಾವಳಿಯನ್ನು ಹೆಲಿಕ್ಯಾಪ್ಟರ್ ಮೂಲಕ ಸೆರೆಹಿಡಿಯಲಾಗಿದು.
ಜಗತ್ತೇ ಬೆರಗಿನಿಂದ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದೆ ಬೆಂಕಿಯನ್ನು ಈಗ ನಂದಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಬೆಂಕಿಯನ್ನು ನಂದಿಸುವಲ್ಲಿ 3ಹಡುಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದವು. ಬೆಂಕಿ ನಂದಿಸಲು 5 ಗಂಟೆಗಳ ಕಾಲ ತಗುಲಿತು ಎಂದು ತಿಳಿದುಬಂದಿದೆ. ಸಾಗರದಡಿ ಪೆಮೆಕ್ಸ್ ಸಂಸ್ಥೆಗೆ ಸೇರಿದ ಪೈಪ್ಲೈನ್ ಸಂಪರ್ಕ ಹಾದುಹೋಗಿತ್ತು. ಬೆಳಿಗ್ಗೆ 5 ಗಂಟೆ ಸುಮಾರಿಗೆ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿತ್ತು. ಬೆಳಿಗ್ಗೆ 10ರ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಬೆಂಕಿ ಪೂರ್ತಿಯಾಗಿ ನಂದಿ ಹೋಗಿತ್ತು. ಬೆಂಕಿ ನಂದಿಸಲು ರಕ್ಷಣಾ ತಂಡದವರು ನೈಟ್ರೋಜನ್ ಬಳಸಿದ್ದಾರೆ. ಪೆಮೆಕ್ಸ್ ಮೆಕ್ಸಿಕೋದ ಅತಿದೊಡ್ಡ ತೈಲ ಪೂರೈಕೆ ಸಂಸ್ಥೆಯಾಗಿದೆ. ಆತಂಕ ಪಡುವಂತ ಯಾವುದೇ ಅನಾಹುತ ತೈಲ ಸೋರಿಕೆ ನಡೆದಿಲ್ಲ ಎಂದು ಸಂಸ್ಥೆ ತಿಳಿಸಿದೆ.
Leave a Comment