ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜಿನ ಪದವಿ, ಸ್ನಾನಕೊತ್ತರ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಶಿಲ್ಡ ಲಸಿಕೆ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿ ಆಧಾರ್ ಕಾರ್ಡ ಮೂಲಕ ಆನಲೈನ್ ನೊಂದಣಿ ನಡೆಸಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಲಸಿಕೆ ವಿತರಣೆ ಜರುಗಿತು.
ಬೆಳಿಗ್ಗೆಯಿಂದಲೇ ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಆಗಮಿಸಿ ಲಸಿಕೆ ಪಡೆದರು. ಕಾಲೇಜಿನ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಶಿಸ್ತಿನಿಂದ ವಾಕ್ಸಿನ್ ನಡೆಯಲು ಸಹಕರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ. ಸುಮಂಗಲಾ ನಾಯಕ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜಿನ ವಿದ್ಯಾರ್ಥಿಗಳ ಆರೊಗ್ಯದ ಹಿತದೃಷ್ಟಿಯಿಂದ ವಿಶೇಷ ಮುತವರ್ಜಿ ವಹಿಸಿ ಲಸಿಕೆ ಪಡೆದಿದ್ದು, ಆರೊಗ್ಯ ಇಲಾಖೆಯ ಸಿಬ್ಬಂದಿಗಳು, ಕಾಲೇಜಿನ ವಿವಿಧ ಘಟಕದ ಸಹಕಾರದ ಮೇರೆಗೆ ಲಸಿಕೆ ನೀಡಲಾಗುತ್ತಿದೆ.
೧೨೩೧ ಲಸಿಕೆ ಅಗತ್ಯವಿದೆ ಎಂದು ಬೇಡಿಕೆ ನೀಡಿದ್ದು ೧೦೦೦ ಲಸಿಕೆ ಬಂದಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಉದ್ದೇಶ ಹೊಂದಿದ್ದು, ಎಲ್ಲರ ಸಹಕಾರದಿಂದ ಯಶ್ವಸಿಯಾಗಿದೆ ಎಂದರು. ಸಾಲ್ಕೋಡ್ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಸಂತೋಷ ಹಾಗೂ ಸಿಬ್ಬಂದಿಗಳು ಕಾಲೇಜಿನ ಉಪನ್ಯಾಕರು ಲಸಿಕಾಕರಣ ಯಶ್ವಸಿಯಾಗಲು ಸಹಕಾರ ನೀಡಿದರು.
Leave a Comment