ಹೊನ್ನಾವರ: ತಾಲೂಕಿನ ಮಂಕಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ಮಾರ್ಟ ತರಗತಿ ಕೋಣೆ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಲೇಟ್ ಪಿಸಿ ಶಾಸಕ ಸುನೀಲ ನಾಯ್ಕ ವಿತರಿಸಿದರು.ಕೋರೋನಾ ಹಿನ್ನಲೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ ವಿತರಿಸಿ ಮಾತನಾಡಿದ ಅವರು ಕಳೆದ ವರ್ಷ ಸರ್ಕಾರ ಲ್ಯಾಪಟಾಪ್ ನೀಡುವ ಮೂಲಕ ಈ ವರ್ಷ ಟ್ಯಾಬ್ ನೀಡುವ ಮೂಲಕ ಶೈಕ್ಷಣಿಕವಾಗಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದೆ.
ಸರ್ಕಾರ ನಮ್ಮೆಲ್ಲರ ತೆರಿಗೆ ಹಣದಿಂದಲೇ ನೀಡುದರಿಂದ ಇದನ್ನು ಉತ್ತಮವಾಗಿಟ್ಟುಕೊಂಡು ಶೈಕ್ಷಣಿಕವಾಗಿ ಪ್ರಯೋಜನ ಪಡೆದುಕೊಳ್ಳಬೇಕು. ಕಾಲೇಜಿಗೆ ಉತ್ತಮ ಕಟ್ಟಡವನ್ನು ಹೊಂದಿದ್ದು ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡುವಂತೆ ಸಲಹೆ ನೀಡಿದರು. ಪ್ರಾಚಾರ್ಯ ಗಣೇಶ ವಿ.ಜಿ. ಮಾತನಾಡಿ ಸ್ಮಾರ್ಟ ರೂಂ ಅಗತ್ಯತೆ ಕುರಿತು ಶಾಸಕರಿಗೆ ತಿಳಿಸಿದಾಗ ೪ ಕೊಠಡಿ ನೀಡುವ ಮೂಲಕ ಸಹಕರಿಸಿದ್ದಾರೆ.
ಅಲ್ಲದೆ ಸರ್ಕಾರದಿಂದ ೯೯ ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸುವಲ್ಲಿಯು ಸಹಕರಿಸಿದ್ದಾರೆ ಎಂದು ಕಾಲೇಜಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ವರದರಂಗನಾಥ , ಸಿ.ಡಿ.ಸಿ ಉಪಾಧ್ಯಕ್ಷ ಸುಬ್ರಾಯ ನಾಯ್ಕ, ಸದಸ್ಯರಾದ ಸುರೇಶ ಖಾರ್ವಿ, ಸಿ.ಎಸ್.ನಾಯ್ಕ, ಸೇರಿದಂತೆ ಪ್ರಮುಖ ಕಾರ್ಯಕರ್ತರು, ಉಪನ್ಯಾಸಕರು ಉಪಸ್ಥಿತರಿದ್ದರು.
Leave a Comment