ಹಾವೇರಿ ;
ರೈಲ್ವೆ ಸ್ಟೇಷನ್ ಸಮೀಪದ ಭೂವಿ ರಾಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಅಡಿಕೆ ಗಾತ್ರದ 30 ಸ್ಫೋಟಕ ವಸ್ತು ದೊರೆತಿದ್ದು, ಅದ ರಲ್ಲಿ ಒಂದನ್ನು ಕೈಯಲ್ಲಿ ಹಿಡಿದು ನೋಡು ತಿದ್ದಾಗ ವ್ಯಕ್ತಿಯೊಬ್ಬರ ಗಾಯವಾದ ಘಟನೆ ಶನಿವಾರ ಸಂಭವಿಸಿದೆ. ಅನುಮಾನಸ್ಪದ ವಸ್ತು ಸ್ಪೋಟದಿಂದ ಇಲಿಯ ಹೊಸನಗರ ನಗರ ನಿವಾಸಿ ಅಬ್ದುಲ್ ಖಾದರ್ ಹಾದಿಮನಿ ಕೈಗೆ ಗಾಯವಾಗಿದೆ .

ಸುದ್ದಿಗಳಿಗಾಗಿ ಈ ಗ್ರುಪ್ ಸೇರಿ; join our group
ತಾಂಡೂರ್ ಎಂಬುವರಿಗೆ ಸೇರಿದ ಖಾಲಿ ಜಾಗದಲ್ಲಿ ಕಲ್ಲುಗಳ ಮಧ್ಯೆ ಅಡಿಕೆ ಗಾತ್ರದ 30 ಸ್ಪೋಟಕ ಪತ್ತೆಯಾಗಿದೆ. ಖಾದರ್ ಅವುಗಳನ್ನು ಎತ್ತಿಕೊಂಡು ಕನಕಪುರ ಮತ್ತು ಭೂ ಕೋಡಿಹಳ್ಳಿ ರಸ್ತೆ ಮಧ್ಯದಲ್ಲಿರುವ ಸೇತುವೆ ಕಟ್ಟೆ ಮೇಲೆ ಇಟ್ಟು ಬಿಡಿಸಲು ಯತ್ನಿಸಿದಾಗ ಸ್ಫೋಟಗೊಂಡು ಅವರ ಕೈಗೆ ಗಾಯವಾಗಿದೆ. ಪೊಲೀಸರು ಸ್ಥಳಕ್ಕೆ ಶ್ವಾನದಳದೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
Leave a Comment