ಯಲ್ಲಾಪುರ : ಗ್ರಾಮೀಣ ಪ್ರದೇಶದ ಅಭ್ಯುದಯ ಹಾಗೂ ಸಬಲೀಕರಣದ ಧ್ಯೇಯೋದ್ದೇಶದ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡ ನೋಬಲ್ ಲೈಫ್ ಟ್ರಸ್ಟ್ ತನ್ನ ಇತಿಮಿತಿಯಲ್ಲಿ ಸಾಧ್ಯವಿದ್ದಷ್ಟು ಕೆಲಸ ಮಾಡುತ್ತಿದೆ ಎಂದು ಉಮ್ಮಚಗಿಯ ನೋಬಲ್ ಲೈಫ್ ಟ್ರಸ್ಟ್ ಅಧ್ಯಕ್ಷೆ ವಿದ್ಯಾ ಹೆಗಡೆ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಪಟ್ಟಣದ ೯ ಪತ್ರಿಕಾ ವಿತರಕರಿಗೆ ದಿನಸಿ ಸಾಮಾನುಗಳ ಕಿಟ್ ವಿತರಿಸಿ, ಪತ್ರಕರ್ತರಿಗೆ ಗೌರವಾರ್ಪಣೆ ಮಾಡಿ ಅವರು ಮಾತನಾಡಿದರು.ನಾಗರಾಜ ಮದ್ಗುಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಸಾತೊಡ್ಡಿ ವಂದಿಸಿದರು.
Leave a Comment