ಹೊನ್ನಾವರ: ಕರೋನ ಮಹಾಮಾರಿಯ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವಾಗಲೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೋಲ್-ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದನ್ನು ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದಿಂದ ಸೋಮವಾರ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸÀಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿಯವರು, ಸರ್ಕಾರ ೨ನೇ ಅಲೆ ಎದುರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೇ ಬಿಜೆಪಿಯವರು ಈ ಹಿಂದೆ ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲ ವಿತರಿಸಿ ಈಗ ದರ ಗಗನಕ್ಕೇರಿಸಿ ಲೂಟಿ ಮಾಡಿದೆ. ಇಂಧನ ಹಾಗೂ ಅನಿಲ ಬೆಲೆ ಏರಿಸಿ ಬಡ ಜನತೆಯ ಭಾರವನ್ನು ಮತ್ತಷ್ಟು ಹೆಚ್ಚಿಸಿದೆ.
ಕೊರೊನಾ ಲಿಸಿಕೆ ಸರಿಯಾಗಿ ವಿತರಿಸದೆ ಗೊಂದಲಕ್ಕೆ ಕಾರಣವಾಗಿದ್ದು, ಸರ್ಕಾರದ ಅವ್ಯವಸ್ಥೆಯಿದ ಹೊರ ದೇಶದವರು ಅಪಹಾಸ್ಯ ಮಾಡುವಂತಾಗಿದೆ.ಕೃಷಿಕರಿಗೆ ಸರಿಯಾದ ಸೌಲಭ್ಯಗಳನ್ನು ನೀಡದೇ ಈ ಪರಿಸ್ಥಿಯಲ್ಲೂ ಅವರ ಸಾಲಗಳನ್ನು ಮನ್ನಾ ಮಾಡದೆ, ರಸ ಗೊಬ್ಬರಗಳ ಬೆಲೆಯನ್ನು ಹೆಚ್ಚಿಸಿದೆ.
ಇದನೆಲ್ಲ ವಿರೋಧಿಸಿ ಜೆಡಿಎಸ್ ಪಕ್ಷವು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.ಜೆಡಿಎಸ್ ಹಿರಿಯ ಮುಖಂಡ ಇನಾಯುತುಲ್ಲಾ ಶಾಬಂದ್ರಿಯವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಅಚ್ಛೆ ದಿನಗಳು ಇನ್ನೂ ಬಂದಿಲ್ಲ. ಇಂಧನ ದರಗಳು ಗಗನಕ್ಕೇರಿವೆ. ಕರೋನಾ ಎರಡನೇ ಅಲೆ ಎದುರಿಸುವಲ್ಲಿ ಸರ್ಕಾರ ನಿರ್ಲಕ್ಷವಹಿಸಿದೆ. ಮೀನುಗಾರರು, ಕಾರ್ಮಿಕರು ಹಾಗೂ ಕೃಷಿಕರನ್ನು ಸರ್ಕಾರ ಸಂಕಷ್ಟಕ್ಕೆ ಗುರಿಮಾಡಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಿ. ಎನ್ ಗೌಡರವರು ಮಾತನಾಡಿ, ಜಿಲ್ಲಾ ಸಚಿವರು ಕಾರ್ಮಿಕ ಸಚಿವರಾಗಿದ್ದರೂ, ಜಿಲ್ಲೆಯ ಕಾರ್ಮಿಕರಿಗೆ ಈವರೆಗೂ ಕಿಟ್ ವಿತರಿಸಲು ಸಾಧ್ಯವಾಗಿಲ್ಲ. ಯಾವುದೇ ಪರಿಹಾರವು ಬಂದಿಲ್ಲ. ಮೀನುಗಾರರ ಸಾಲಮನ್ನಾ, ಕೃಷಿಕರಿಗೆ ಸಬ್ಸಿಡಿ ಈವರೆಗೆ ಸರ್ಕಾರ ನೀಡಿಲ್ಲ ಎಂದು ಸರ್ಕಾರದ ನಿಲುವನ್ನು ಖಂಡಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಮಂಕಿ ಬ್ಲಾಕ್ ಅಧ್ಯಕ್ಷ ಟಿ. ಟಿ ನಾಯ್ಕ ಈ ಸಂದರ್ಭದಲ್ಲಿ ಮಾತನಾಡಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕಾದ್ಯಕ್ಷ ಸುಬ್ರಾಯ ಗೌಡ, ಮುಖಂಡರಾದ ಪಿ. ಟಿ. ನಾಯ್ಕ, ವಿ.ಎಂ.ಭಂಡಾರಿ, ಶಂಕರ ಗೌಡ, ಜಿ. ಕೆ. ಪಟಗಾರ್, ಸಿ. ಜೆ ಗೌಡ, ಧರ್ಮ ಗೌಡ ಮಂಕಿ ಮುಂತಾದವರು ಉಪಸ್ಥಿತರಿದ್ದರು.ಶಂಕರ ಗೌಡ ಗುಣವಂತೆಯವರು ಮನವಿ ವಾಚಿಸಿದರು. ಪಟ್ಟಣದ ಶರವಾತಿ ಸರ್ಕಲ್ ಬಳಿಯಿಂದ ತಹಶೀಲ್ದಾರ್ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ರಾಜ್ಯ ಜನತೆಯ ಪರವಾಗಿ ತಹಶೀಲ್ದಾರ ವಿವೇಕ ಶೆಣ್ವಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Leave a Comment