ರಾಯಬಾಗ:
ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಮಾವಿನಹೊಂಡ ಗ್ರಾಮದ ರೈತ ಮಲ್ಲಪ್ಪ ಕುಲಗುಡೆ ಅವರು ತಮ್ಮ ಸರ್ವೆ
ನಂಬರ 21/1ರ ಹೊಲದಲ್ಲಿ ಬಾವಿ ಕಳ್ಳತನ ಆಗಿದೆ ಎಂದು ಆರೋಪಿಸಿ
ಬಾವಿ ಹುಡುಕಿ ಕೊಡುವಂತೆ ರಾಯಬಾಗ ಪೊಲೀಸ್ ಠಾಣೆಯ
ಮೆಟ್ಟಿಲೇರಿದ ಅಚ್ಚರಿ ಘಟನೆ ರಾಯಬಾಗದಲ್ಲಿ ನಡೆದಿದೆ.
2020ರ ಏಪ್ರಿಲ್ ತಿಂಗಳಿನಿಂದ 2021ರ ಅವಧಿಯಲ್ಲಿ ಉದ್ಯೋಗ
ಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 77000 ಸಾವಿರ ರೂಪಾಯಿ
ವೆಚ್ಚದಲ್ಲಿ ಬಾವಿ ತೆಗೆಯಲಾಗಿದೆ ಎಂದು ಗ್ರಾಮ ಪಂಚಾಯಿತಿಯ
ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ಎಂದು ರೈತ ಮಲ್ಲಪ್ಪಾ ಕುಲಗಡೆ ಅವರು ಆರೋಪಿಸಿದ್ದಾರೆ. ರಾಯಬಾಗ
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು ನಮ್ಮ ಹೊಲದ
ಸರ್ವೆ ನಂ 21/1ರಲ್ಲಿ ಬಾವಿ ತೋಡಿದಾಗಿ ನಕಲಿ ದಾಖಲೆ ಸೃಷ್ಟಿಸಿ ನನ್ನ
ಹಾಗೂ ನಮ್ಮ ಮನೆ ಸದಸ್ಯರ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಮತ್ತು ಅಭಿವೃದ್ಧಿ ಅಧಿಕಾರಿ ಬಿಲ್ಲ ಹಣ ಜಮಾ ಮಾಡಿಸಿ ಅಲ್ಲದೆ ಮನೆಗೆ
ಬಂದು ತಮ್ಮ ಸಹೋದರನಿಗೆ ಬಾವಿ ಮಂಜೂರಾಗಿದ್ದು ನಿಮ್ಮ ಖಾತೆಗೆ
ಹಣ ಬಂದಿದೆ ಎಂದು ತಮ್ಮ ಖಾತೆಗೆ ಹಣ ಡ್ರಾ ಮಾಡಿಸಿಕೊಂಡಿದ್ದಾರೆ
ಎಂದು ಆರೋಪಿಸಿದರು.
ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ಹೋಗಿರುವ ರೈತ ಮಲ್ಲಪ್ಪಾ
ಕುಲಗುಡೆ ಕಳೆದು ಹೋಗಿರುವ ಬಾವಿಯನ್ನು ಹುಡುಗಿ ಕೊಂಡಿ ಇಲ್ಲವೇ
ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಪೆÇಲೀಸರಿಗೆ ಮನವಿ
ಸಲ್ಲಿಸಿದ್ದಾರೆ ಅಲ್ಲದೆ ಇಂತಹ ಘಟನೆಗಳು ರಾಯಬಾಗ ತಾಲೂಕಿನಲ್ಲಿ
ನಡೆಯುವುದು ಸಾಮಾನ್ಯ ಎಂದು ಜನ ಮಾತನಾಡುತ್ತಿದ್ದಾರೆ.
Leave a Comment