ಯಲ್ಲಾಪುರ : ಹೊಸದಿಗಂತ ಪತ್ರಿಕೆಯ ವತಿಯಿಂದ ವೈದ್ಯರ ದಿನಾಚರಣೆ ನಿಮಿತ್ತ ಸೋಮವಾರ ಸಂಜೆ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ದಂಪತಿಯಾದ ಡಾ.ದೀಪಕ ಭಟ್ಟ ಮತ್ತು ಡಾ
ಸೌಮ್ಯ ಕೆ.ವಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೈದ್ಯ ದಂಪತಿಯ ಮದುವೆಯ ವಾರ್ಷಿಕೋತ್ಸವದ ದಿನವೇ ಸರ್ಕಾರಿ ಆಸ್ಪತ್ರೆ ಸಭಾಭವನದಲ್ಲಿ ಸರಳ ಸುಂದರವಾಗಿ ಈ ಸನ್ಮಾನ ಕಾರ್ಯಕ್ರಮ ಜರುಗಿತು.
ಸನ್ಮಾನ ನಡೆಸಿ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ಸನ್ಮಾನ ಎನ್ನುವುದು ಪ್ರತಿಯೊಬ್ಬನಿಗೂ ಜನರ ಸೇವೆಗೆ ಇನ್ನಷ್ಟು ತೊಡಗುವಂತೆ ಮಾಡುವ ವೇಗ ವರ್ಧಕ ಇದ್ದಂತೆ.ಈ ವೈದ್ಯ ದಂಪತಿ ತಮ್ಮ ಜನಪರ ಕಾಳಜಿ ಕರ್ತವ್ಯ ನಿಷ್ಠೆಯ ಮೂಲಕ ಯಲ್ಲಾಪುರದ ಆಸ್ತಿಯಾಗಿದ್ದು ಇವರನ್ನು ಹೊಸದಿಗಂತ ಪತ್ರಿಕೆ ಗೌರವಿಸುವ ಮೂಲಕ ಮಾದರಿ ಕಾರ್ಯ ಮಾಡಿದೆ. ವೈದ್ಯರಲ್ಲಿ ಜನರಿಗಾಗಿ ಕೆಲಸ ಮಾಡುವ ಉತ್ಸಾಹ ಹೆಚ್ಚುವಂತಾಗಿದೆ ಎಂದರು.
ಹೊಣೆ ಹೆಚ್ಚಿದೆ:
ಸನ್ಮಾನ ಸ್ಬೀಕರಿಸಿ ಮಾತನಾಡಿದ ಡಾ. ಸೌಮ್ಯ , ಹೊಸದಿಗಂತ ನೀಡಿದ ಸನ್ಮಾನ ನಮ್ಮ ಹೊಣೆಗಾರಿಕೆ ಹೆಚ್ಚಿಸಿದ್ದು, ಜನರಿಗಾಗಿ ಇನ್ನಷ್ಟು ಸಮರ್ಪಿತ ಸೇವೆ ಮಾಡುವಂತೆ ಪ್ರೇರಣೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸ್ಟಾಫ್ ನರ್ಸ್ ಸಾರಮ್ಮಾ ಅವರ ಸೇವೆಯನ್ನು ಗುರುತಿಸಿ ಅವರ ಜನ್ಮದಿನದ ಸಂದರ್ಭದಲ್ಲಿ ಗೌರವಿಸಲಾಯಿತು.
ಹೊಸದಿಗಂತ ಯಲ್ಲಾಪುರ ವರದಿಗಾರರಾದ ಪ್ರಭಾವತಿ
ಗೋವಿ ಸ್ವಾಗತಿಸಿದರು.
ಹೊಸದಿಗಂತ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ವಿಠ್ಠಲದಾಸ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಪತ್ರ ಕರ್ತ &ವಿತರಕ ಜಯರಾಜ ಗೋವಿ ವಂದಿಸಿದರು.
ವೈದ್ಯರಾದ ಡಾ. ನೋಹನ್ ನಿರ್ವಹಿಸಿದರು.
ಡಾ. ಕುಲು ಸಿಂಗ್, ಡಾ. ಗೀತಾ ,ಲತಾ ವಿ. ಕಾಮತ್ ಉಪಸ್ಥಿತರಿದ್ದರು. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ದೀಪಕ ಭಟ್ಟ ಪ್ರಸೂತಿ ವೈದ್ಯರಾಗಿ, ಡಾ. ಸೌಮ್ಯ ಕೆ.ವಿ. ಅಂಕಣಕಾರರಾಗಿ,ನೇತ್ರ ತಜ್ಞರಾಗಿ, ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.
Leave a Comment