ಶಿರಸಿ ತಾಲೂಕಿನ RTO ಕಛೇರಿ ಬಳಿ ಅನಾಥ ವ್ರದ್ಧ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಮಳೆಯಲ್ಲಿಯೇ ಅನಾಥ ಸ್ಥಿತಿಯಲ್ಲಿ ಇರುವ ಬಗ್ಗೆ ಸ್ಥಳೀಯರಾದ ರುದ್ರಗೌಡ್ ಪಾಟೀಲ್ ರವರು ನನಗೆ ಕರೆ ಮಾಡಿ ಮಾಹಿತಿ ನೀಡಿದರು. ನಾನು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಭೀಮಾಶಂಕರ್ ರವರಿಗೆ ಕರೆಮಾಡಿ ಈ ಕುರಿತು ಮಾಹಿತಿ ನೀಡಿದೆ.
ಇದಲ್ಲದೆ ಸ್ಥಳೀಯರಾದ ರುದ್ರಗೌಡ್ ಪಾಟೀಲ್ ರವರು ಹಾಗೂ ಬಿಜೆಪಿ ಮುಖಂಡರು ಹಾಗೂ ಶಿರಸಿ ನಗರಸಭೆ ಸದಸ್ಯರಾದ ಶ್ರೀಕಾಂತ ಬಳ್ಳಾರಿ ರವರು ಖುದ್ದಾಗಿ ಪೋಲಿಸ್ ಠಾಣೆಗೆ ಹೋಗಿ ಪೋಲಿಸ್ ಅಧಿಕಾರಿಗಳಿಗೆ ಈ ಅಜ್ಜನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುತ್ತಾರೆ. ತಕ್ಷಣ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಭೀಮಾಶಂಕರ್ ರವರು ತಮ್ಮ ಸಿಬ್ಬಂದಿಯವರೊಂದಿಗೆ ಈ ಅಜ್ಜ ಇರುವ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು.
ನಂತರ ಪಿ ಎಸ್ ಐ ರವರು ಈತನನ್ನು ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವಂತೆ ನನ್ನನ್ನು ಕೋರಿಕೊಂಡರು. ಈ ಅನಾಥ ವ್ರದ್ಧ ವ್ಯಕ್ತಿಯನ್ನು ರಕ್ಷಣೆ ಮಾಡಿ ಸಿದ್ದಾಪುರದ ಮುಗದೂರಿನ ದೇವಸ್ಥಳದಲ್ಲಿರುವ ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದಿರುತ್ತೇನೆ.
ನಂತರ ಈ ಅಜ್ಜನನ್ನು ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆತರಲಾಗಿದೆ. ಈ ಅಜ್ಜ ಕನ್ನಡ ಮಾತನಾಡುತ್ತಿದ್ದಾನೆ. ತನ್ನ ಹೆಸರು ಶಂಕರ ಊರು ಬಂಡಲ್ ಎಂದು ಹೇಳುತ್ತಿದ್ದಾನೆ.
ನಂತರ ಈತನ ಕಟಿಂಗ್ ದಾಡಿ ಮಾಡಿ ಸ್ನಾನ ಮಾಡಿಸಲಾಗಿದೆ. ಈ ಅಜ್ಜ ಈಗ ದೇವಸ್ಥಳದಲ್ಲಿರುವ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಇವರ ಗುರುತು ಪರಿಚಯ ಇರುವವರು 9481389187 ಈ ನಂಬರಿಗೆ ಮಾಹಿತಿ ನೀಡಬೇಕಾಗಿ ವಿನಂತಿ. ಈ ಸೇವೆಗೆ ಸಹಾಯ, ಸಹಕಾರ ನೀಡುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಹಣ ಸಂದಾಯ ಮಾಡಬಹುದು.
PRACHALITA PUBLIC CHARITABLE TRUST
A/C No:- 03083070000994 ,
Canara Bank, Siddapur Branch,
IFSC Code: – CNRB0010308 ಅಥವಾ *9481389187 ಈ ಪೋನ್ ಪೇ* ನಂಬರಿಗೆ ಕೂಡ ಕಳುಹಿಸಿ ಕೊಡಬಹುದು. ನಾಗರಾಜ ನಾಯ್ಕ ಮುಖ್ಯಸ್ಥರು
ಪ್ರಚಲಿತ ಆಶ್ರಯಧಾಮ ಅನಾಥಾಶ್ರಮ ,ಮುಗದೂರು, ಪೊ.ಕೊಂಡ್ಲಿ, ತಾ.ಸಿದ್ದಾಪುರ, ಉಕ -581355
ಮೊ. 9481389187
Leave a Comment