ರಾಷ್ಟ್ರಗೀತೆಯನ್ನು ” ಚಾಕ್ ಪೀಸ್ ‘ ಆರ್ಟ ಮೂಲಕ ರಚಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾದನೆಗೈದ ತಾಲ್ಲೂಕಿನ ಗೆರುಸೊಪ್ಪದ ತರುಣ ಪ್ರದೀಪ್ ನಾಯ್ಕ ಇವರನ್ನು ಹೊನ್ನಾವರ ತಾಲ್ಲೂಕು ಯುವಮೋರ್ಚಾ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ ನಾಯಕ ಇಂತಹ ಸಾಧಕರೇ ಯುವಕರಿಗೆ ಪ್ರೇರಣೆ, ಲಾಕ್ ಡೌನ್ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿರುವುದು ಮೆಚ್ಚುವ ಕಾರ್ಯ ಎಂದರು. ಮತ್ತು ಸಾಧಕರನ್ನು ಸನ್ಮಾನಿಸುವ ಯುವಮೋರ್ಚಾ ಹೊನ್ನಾವರ ಘಟಕದ ಕಾರ್ಯವನ್ಮು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ ಸಚಿನ್ ಶೇಟ್ ಇಂತಹ ಗ್ರಾಮೀಣ ಪ್ರತಿಭೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ದೊರಕಬೇಕು ಹಾಗೂ ಪ್ರದೀಪ ಅವರ ಸಾಧನೆ ಗ್ರಾಮೀಣ ಯುವಕರಿಗೆ ಮಾದರಿ ಆಗಬೇಕು. ಇಂತಹ ಕಲೆ ಮುಂದಿನ ಪೀಳಿಗೆಗೂ ಪಸರಿಸುವ ನಿಟ್ಟಿನಲ್ಲಿ ಯುವಕರು ಕಾರ್ಯ ಪೃವೃತ್ತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಧರ ನಾಯ್ಕ , ತಾಲ್ಲೂಕು ಪ್ರಭಾರಿಗಳಾದ ಶಬರೀಶ್, ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಗೌಡ , ಕೃಷ್ಣ ಜೋಷಿ, ಕಾರ್ಯದರ್ಶಿ ಶಿವರಾಜ್ ನಾಯ್ಕ, ಪ್ರದೀಪ್ ನಾಯ್ಕ ಮಹಿಮೆ, ಮೂಡ್ಕಣಿ ಪಂಚಾಯತ್ ಸದಸ್ಯರು, ಯುವ ಒಕ್ಕೂಟದ ಅಧ್ಯಕ್ಷರು ವಿನಾಯಕ ನಾಯ್ಕ, ನಗರಬಸ್ತಿಕೇರಿ ಪಂಚಾಯತ್ ಸದಸ್ಯರಾದ ಮಹೇಶ್ ನಾಯ್ಕ ಅಡಿಗದ್ದೆ, ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಚಂದ್ರಕಲಾ ನಾಯ್ಕ, ಬೂತ್ ಸಮಿತಿ ಕಾರ್ಯಕರ್ತರು ಆದ ಹರೀಶ್ ಮೇಸ್ತ, ಭಾಸ್ಕರ್ ನಾಯ್ಕ ಇತರರು ಹಾಜರಿದ್ದರು.
Leave a Comment