ಶಿರಸಿ ;
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಬಿ.ಕಾಮ್ .ಅಂತಿಮ ವರ್ಷದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯಕ್ಕೆ ಎರಡು ರ್ಯಾಂಕ್ ದೊರೆಯುವುದರೊಂದಿಗೆ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೆರಿಸಿಕೊಂಡಿದೆ.
ಕುಮಾರ್ ಮಧು ಗಜಾನನ ಹೆಗಡೆ ಶೇಕಡ, 94.92 ಅಂಕಗಳನ್ನು ಪಡೆದು ಐದನೇ ರ್ಯಾಂಕ್ ಹಾಗೂ ಕುಮಾರಿ ಶ್ರುತಿ ದಿವಸ್ಪತಿ ಹೆಗಡೆ ಶೇಕಡ 94 . 54 ಅಂಕಗಳೊಂದಿಗೆ 8ನೇ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಂ.ಇ.ಎಸ್ ಅಧ್ಯಕ್ಷ ಜಿ. ಎಂ. ಹೆಗಡೆ ಮುಳ ಖಂಡ ಪ್ರಾಚಾರ್ಯ ಡಾ. ಟಿ.ಎಸ್ ಹಳೆಮನೆ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಪ್ರಾಧ್ಯಾಪಕರು, ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Leave a Comment