ಹೊನ್ನಾವರ; ತಂಬಾಕು ನಿಯಂತ್ರಣಾ ಘಟಕ ಆರೋಗ್ಯಾಧಿಕಾರಿಗಳ ಕಛೇರಿ,ಹಾಗೂ ಪಟ್ಟಣ ಪಂಚಾಯತ ಮಂಕಿ, ಹಾಗೂ ಆರಕ್ಷಕ ಠಾಣೆ ಮಂಕಿಯನ್ನೊಳಗೊಂಡ ತಂಬಾಕು ನಿಯಂತ್ರಣಾ ಅಧಿಕಾರಿಗಳ ತಂಡವು ಪಟ್ಟಣ ಪಂಚಾಯತ ಮಂಕಿ ವ್ಯಾಪ್ತಿಯಲ್ಲಿ ಹಠಾತ್ ದಾಳಿ ನಡೆಸಿ, ತಂಬಾಕು ಮಾರಾಟಗಾರರ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದ್ದು, ಕೋಟ್ಟಾ ಕಾಯ್ದೆ ೨೦೦೩ರ ಅಡಿಯಲ್ಲಿ ಸೆಕ್ಷನ್ (೪)ರಡಿಯಲ್ಲಿ ೧೭ ಕೇಸು , ಸೆಕ್ಷನ್-೬ (ಎ) ರಡಿಯಲ್ಲಿ ೧೭ ಕೇಸು ದಾಖಲಿಸಿ ಒಟ್ಟೂ ಅಂಗಡಿಕಾರರಿಂದ ೨೯೦೦ ರೂಪಾಯಿಗಳನ್ನು ದಂಡ ವಿಧಿಸಲಾಗಿದೆ.
ಈ ಸಂಧರ್ಭದಲ್ಲಿ ಅಂಗಡಿಕಾರರಿಗೆ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಪ್ರೇಮಕುಮಾರ ನಾಯ್ಕ ಹಾಗೂ ತಾಲೂಕಾ ಆರೋಗ್ಯಾಧಿಕಾರಿಯಾದ ಡಾ|| ಉಷಾ ಹಾಸ್ಯಗಾರ ತಂಬಾಕು ನಿಯಂತ್ರಣಾ ಹಾಗೂ ಜಾರಿಯಲ್ಲಿರುವ ಕಾಯ್ದೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧ, ಅನಧಿಕೃತವಾಗಿ ನಾಮಫಲಕ ಅಳವಡಿಸದೇ ನಿಷೇದಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡವುದು, ತಂಬಾಕು ಉತ್ಪನ್ನ ಬಳಕೆಯಿಂದ ಸಾರ್ವಜನಿಕರ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಆರೋಗ್ಯ ಶಿಕ್ಷಣ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜೇಯ ಭಂಡಾರಕರ್‌ರವರು ದಾಳಿಯಲ್ಲಿ ಭಾಗವಹಿಸಿ, ಮಂಕಿ ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ಕುರಿತು ಅಂಗಡಿಕಾರರಿಗೆ ಎಚ್ಚರಿಕೆ ನೀಡಿ ಸರ್ಕಾರದ ನಿಯಮವನ್ನು ಮೀರಿ ವ್ಯವಹರಿಸಿದ್ದಲ್ಲಿ ಅಂಗಡಿಗಳ ಪರವಾನಿಗೆಯನ್ನು ಮುಟ್ಟುಗೋಲು ಹಾಕಿಕೊಂಡು ಕ್ರಮ ವಹಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಸಿಬ್ಬಂಧಿಯಾದ ನದಾಫ್ ಸಾಬ್, ಪಟ್ಟಣ ಪಂಚಾಯತ ಮಂಕಿಯ ಸಿಬ್ಬಂಧಿಗಳಾದ ವಿಷ್ಣು ನಾಯ್ಕ , ಶ್ರೀನಿವಾಸ ಹಳೇರ, ಗಣೇಶ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಮಂಕಿಯ ಆರಕ್ಷಕಠಾಣೆಯ ಸಹಾಯಕ ಜೋಲೀಸ್ ನಿರೀಕ್ಷಕರಾದ ಅಪ್ಪಣ್ಣ ದಾಳಿಯಲ್ಲಿ ಭಾಗವಹಿಸಿದ್ದರು.
Leave a Comment