ಯಲ್ಲಾಪುರ: ಮಂಗಳೂರಿನಿAದ ರಾಮನಗರಕ್ಕೆ ಹೊರಟಿದ್ದ ಗ್ಯಾಸ್ ತುಂಬಿದ ಟ್ಯಾಂಕರ ಯಲ್ಲಾಪುರ -ಹಳಿಯಾಳ ರಸ್ತೆಯ ತಾಟವಾಳ ಬಳಿ ನಸುಕಿನ ಜಾವ ರಸ್ತೆ ಪಕ್ಕದ ಅರಣ್ಯದಲ್ಲಿ ಉರುಳಿ ಬಿದ್ದಿದೆ.ಅದೃಷ್ಟವಶಾತ್ ಟ್ಯಾಂಕರ ನಿಂದ ಅನಿಲ ಸೋರಿಕೆಯಾಗದ್ದರಿಂದ ಯಾವದೇ ಅಪಾಯ ಸಂಭವಿಸಿಲ್ಲ.ಅಪಘಾತದಲ್ಲಿ ಗ್ಯಾಸ್ ಟ್ಯಾಂಕರ ನ ಚಾಲಕ ಕೂರುವ ಭಾಗ ಸಂಪೂರ್ಣ ನುಜ್ಜು ನುಜ್ಜಾಗಿದೆ. ಚಾಲಕ ಅಭಿಷೇಕ ರಾಯ್ (೨೭) ಗಾಯಗೊಂಡಿದ್ದು ,ಯಲ್ಲಾಪುರದ ಆಸ್ಪತ್ರ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸಿಪಿಐ ಸುರೇಶ ಯಳ್ಳೂರ,ಪಿಎಸ್ ಐ ಮಂಜುನಾಥ ಗೌಡರ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಮಂಗಳೂರಿನಿAದ ಕ್ರೇನ್ ತರಿಸಿ ಬಿದ್ದಿರುವ ಗ್ಯಾಸ್ ಟ್ಯಾಂಕರ ಮೇಲೆತ್ತಿದರು. ಯಲ್ಲಾಪುರ ಅಗ್ನಿಶಾಮಕ ದಳ ಹಾಗೂ ಅಂಕೋಲಾದ ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು ಅನಿಲ ಸೋರಿಕೆಯಾಗದಂತೆ ನಿಗಾ ವಹಿಸಿದ್ದರು.
Leave a Comment