ಹೊನ್ನಾವರ: ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದ ಹೊದ್ಕೆಯ ಶ್ರೀಕಾಂತ ರಮೇಶ ನಾಯ್ಕ (43) ಅವರು ತೀವ್ರ ಅನಾರೋಗ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಶ್ರೀಕಾಂತ ರಮೇಶ ನಾಯ್ಕ ಅವರು ಚಂದಾವರ ಗ್ರಾಪಂ ಎರಡು ಅವಧಿಗೆ ಸದಸ್ಯರಾಗಿ, ಅಧ್ಯಕ್ಷರಾಗಿ ಹಾಗೂ ಚಂದಾವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿ, ಹಾಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಸೇರಿದಂತೆ ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಚಂದಾವರ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಾಂತ ರಮೇಶ ನಾಯ್ಕ ಅಕಾಲಿಕ ನಿಧನ ಚಂದಾವರ ಸುತ್ತಲಿನ ಜನತೆಗೆ ಬರಸಿಡಿಲಿನಂತೆ ಎರಗಿದ್ದು, ಊರಿಗೆ ಊರೇ ಕಂಬನಿ ಮಿಡಿದಿದೆ. ಸುತ್ತಮುತ್ತಲ ಗ್ರಾಮಗಳ ಪಾಲಿಗೆ ಅವಿಭಾಜ್ಯವಾಗಿದ್ದ ಶ್ರೀಕಾಂತ ನಾಯ್ಕ ಅವರ ನಿಧನ ಆ ಭಾಗದ ಜನರಲ್ಲಿ ಮೌನ ಆವರಿಸುವಂತೆ ಮಾಡಿದೆ. ಶ್ರೀಕಾಂತ ಅವರ ಸಹಕಾರ ಎಲ್ಲರೂ ನೆನೆಯುವಂತೆ ಮಾಡಿದೆ. ರಾಜಕೀಯ ರಂಗದಲ್ಲಿ ಸರಳತೆ, ಸಜ್ಜನಿಕೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಶ್ರೀಕಾಂತ ನಾಯ್ಕ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.
Leave a Comment