ಯಲ್ಲಾಪುರ : ರಾಷ್ಟಿçÃಯ ಹೆದ್ದಾರಿ ೬೩ ಪಟ್ಟಣದ ಹಿಂದೂ ರುದ್ರ ಭೂಮಿ ಬಳಿಯ ಸೇತುವೆಯ ಕೆಳಗೆ.ಶನಿವಾರ ರಾತ್ರಿ ಬೈಕನೊಂದಿಗೆ ವ್ಯಕ್ತಿಯೊಬ್ಬರು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಮೃತಪಟ್ಟವರನ್ನು ಮುಂಬೈ ಮಲಾಡಿನ ಎಸ್.ಆರ್.ಸಿ.ಸಿ ಮಕ್ಕಳ ಆಸ್ಪತ್ರೆಯ ಬ್ರಾಂಡಿಂಗ್ ಮ್ಯಾನೇಜರ್ ಎಂದು ಕೆಲಸ ಮಾಡುತ್ತಿರುವ ಬೈಕ್ ಸವಾರ ಕಲಕತ್ತಾ ಮೂಲದ ಸಯಾನ್ ಸ್ವಪನ್ ಬ್ಯಾನರ್ಜಿ(೩೬) ಎಂದು ಗುರುತಿಸಲಾಗಿದೆ.ಇವರು ತಮ್ಮ ರಾಯಲ್ ಎನಫಿಲ್ಡ್ ಬೈಕ್ ನಲ್ಲಿ ಹುಬ್ಬಳ್ಳಿ ಕಡೆಯಿಂದ ಅತೀ ವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು ಬಂದು ಪಟ್ಟಣ ವ್ಯಾಪ್ತಿಯ ರಾ.ಹೆ.೬೩ರ ಹಿಂದೂ ರುಧ್ರಭೂಮಿಯ ಬಳಿಯಿರುವ ತಣ್ಣಿರುಹಳ್ಳದ ಸೇತುವೆಯ ಕೆಳಗೆ ೨೦ ಅಡಿ ಆಳದಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಸ್ಥಳಕ್ಕೆ ಪೋಲಿಸ್ ನಿರೀಕ್ಷಕ ಸುರೇಶ ಯಳ್ಳುರ,ಪಿ ಎಸ್ ಐ ಮಂಜುನಾಥ ಗೌಡರ ಭೇಟಿ ನೀಡಿ ಪರೀಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ .
Leave a Comment