ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಕುದಾಮೊಹಲ್ಲಾ ಕೆಪ್ಪನ ಹಿತ್ತಲದಲ್ಲಿರುವ ತನ್ನ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬಳು ಎರಡು ವರ್ಷದ ಮಗುವಿನೊಂದಿಗೆ ಹೊರಗೆ ಹೋಗಿದ್ದವಳು ಮನೆಗೆ ಮರಳದೇ ಕಾಣೆಯಾಗಿದ್ದಾಳೆನ್ನಲಾದ ಮಹಿಳೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಪೀಫಾ ಸಲೀಂ ಮುಲ್ಲಾ (24) ಕಾಣೆಯಾದ ಮಹಿಳೆಯಾಗಿದ್ದು. ಈಕೆಯನ್ನು ಕೆಲ ವರ್ಷಗಳ ಹಿಂದೆ ಶಿರೂರಿಗೆ ಮದುವೆಮಾಡಿಕೊಡಲಾಗಿತ್ತು. ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲದಲ್ಲಿರುವ ತಾಯಿಯ ಮನೆಗೆ ತನ್ನ ಎರಡು ವರ್ಷದ ಮಗುವಿನೊಂದಿಗೆ ಬಂದಿದ್ದ ಜುಲೈ ೧೨ರಂದು ಮಗುವಿನ ಜೊತೆ ಮನೆಯಿಂದ ಹೊರಗೆ ಹೋದವಳು ವಾಪಸ್ಸು ಮನೆಗೆ ಬಂದಿಲ್ಲ ಎಂದು ಆಪೀಫಾಳ ತಂದೆ ಸುಲೇಮಾನ್ ಫಕೀರಾ ದಾವಲ್ ಮಂಕಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದಾರೆ.
5 ಪೂಟ್ ಎತ್ತರವಿರುವ ಆಪೀಪಾ ಗೋದಿ ಮೈ ಬಣ್ಣದವಳಾಗಿದ್ದು ಎರಡೂ ಕೈಗಳಿಗೆ ಮೆಹಂದಿ ಹಚ್ಚಿಕೊಂಡಿದ್ದಾಳೆ. ಎರಡು ವರ್ಷದ ಮಗ ಜೊತೆಯಲ್ಲಿಯೇ ಇದ್ದು ಚೂಡಿದಾರ್ ಧರಿಸಿದ್ದಾಳೆ. ಈ ಚಹರೆಯವಳು ಎಲ್ಲಿಯಾದರೂ ಕಾಣಿಸಿದಲ್ಲಿ (ಮಂಕಿ ಪೊಲೀಸ್ ಠಾಣೆ 08387 -257886)ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
Leave a Comment