
ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಪ್ರತಿಷ್ಢಿತ ಕೆ.ಶ್ಯಾಮರಾವ್ ದತ್ತಿ ನಿಧಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಹಾಗೂ ಹೊಸದಿಗಂತ ಪತ್ರಿಕೆ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ವಿಠ್ಠಲದಾಸ ಕಾಮತ ಅಂಕೋಲಾ ಆಯ್ಕೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಯಲ್ಲಾಪುರ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜು18ರಂದು ಯಲ್ಲಾಪುರದಲ್ಲಿ ನಡೆಯಲಿರುವ ಜಿಲ್ಲಾ ಪತ್ರಿಕಾ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ನೆರವೇರಲಿದೆ. ಕಳೆದ ಎರಡು ವರ್ಷಗಳ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, 2020ನೇ ಸಾಲಿನ ಪ್ರಶಸ್ತಿಗೆ ಜಯರಾಮ ಹೆಗಡೆ ಹಾಗೂ 2021ನೇ ಸಾಲಿನ ಪ್ರಶಸ್ತಿಗೆ ವಿಠ್ಠಲದಾಸ ಕಾಮತ ಆಯ್ಕೆಯಾಗಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ, ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ, ರಾಜ್ಯ ಸಮಿತಿ ಸದಸ್ಯ ಜಿ. ಸುಬ್ರಾಯ ಭಟ್ಟ ಬಕ್ಕಳ ಹಾಗೂ ಸಂಘದ ಉಪಾಧ್ಯಕ್ಷ ಬಿ.ವಿ. ಪಾಟೀಲಮುಂಡಗೋಡ ಇವರನ್ನು ಒಳಗೊಂಡ ಸಮಿತಿಯು ಕಾರ್ಯಕಾರಿ ಸಮಿತಿಯ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಿದೆ.
Leave a Comment