ಕುಣಿಗಲ್ ;
ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಖಾಸಗಿಯಾಗಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಕೂರಿಸುತ್ತೆನೆ0ದು ಎಂದು ಹೇಳಿ ಸಾವಿರ ರೂ ಪಡೆದು ವಂಚಿಸಿದ್ದಾರೆಂದು . ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿರುವ ಪೋಷಕರು ಕ್ರಮಕ್ಕೆ ಆಗ್ರಹಿಸಿದ್ದಾರೆ .ಪಟ್ಟಣದ ರವಿಗೌಡ ಎಂಬುವವರು ತಮ್ಮ ಮಗಳನ್ನು ಖಾಸಗಿಯಾಗಿ ಎಸ್. ಎಸ್. ಎಲ್ .ಸಿ .ಪರೀಕ್ಷೆಗೆ ಕಟ್ಟಿಸಲು ಶಾಲೆಗೆ ಹೋದಾಗ ಅಲ್ಲಿದ್ದ ಶಿಕ್ಷಕರ ಅಜೀಜ್ಉಲ್ಲಾಖಾನ್ ಅವರು ನಾನೇ ಖಾಸಗಿಯಾಗಿ ಕಟ್ಟಿಸುವ ಅಧಿಕಾರಿ ಎಂದು ಹೇಳಿ ಹಣಪಡೆದಿದ್ದು ಪರೀಕ್ಷಾ ದಿನ ಹತ್ತಿರ ಬಂದರೂ ಪ್ರವೇಶಪತ್ರ ಕೊಡಿಸಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ನಮಗೆ ಬೆದರಿಕೆ ಹಾಕಿದ್ದಾರೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸಿ ನನ್ನ ಮಗಳಿಗೆ ನ್ಯಾಯ ಕೊಡಿಸಬೇಕೆಂದು ರವಿಗೌಡ ಕ್ಷೇತ್ರಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
Leave a Comment