ಶಿರಸಿ : ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಶ್ರೀಮತಿ ಯಶೋದಾ ಬಂಗಾರ ಗೌಡ ಮೃತಪಟ್ಟ ಅಹಿತಕರ ಘಟನೆ ನಿನ್ನೆ ನಡೆದಿದ್ದು ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಭೇಟಿ ನೀಡಿ ಮುಂದಿನ 48 ಗಂಟೆಗಳ ಒಳಗಾಗಿ ಪರಿಹಾರಧನ್ನು ನೀಡುವುದಾಗಿ ಭರವಸೆ ನೀಡಿದರು.
ಅದರಂತೆ ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಘಟನೆ ನಡೆದ 16 ಗಂಟೆಗಳ ಒಳಗಾಗಿ ಖುದ್ದಾಗಿ ತಾವೇ ಮೃತರ ಮನೆಗೆ ಭೇಟಿ ನೀಡಿ ಸುಮಾರು 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಘಟನೆ ನಡೆದ 16 ಗಂಟೆಗಳ ಒಳಗಾಗಿ ಮೃತರ ಕುಟುಂಬಕ್ಕೆ ಸಚಿವರು ಸಹಾಯಧನವನ್ನು ನೀಡಿರುವುದರ ಬಗ್ಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.\
Leave a Comment