ಮೈಸೂರು ನಲ್ಲಿರುವ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು
ತಾಂತ್ರಿಕ ತರಬೇತಿ ಸಂಸ್ಥೆಯು 2021- 22ನೇ ಸಾಲಿನ ಡಿಪ್ಲೊಮಾ ಮತ್ತು ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದೆ. ಎಸ್ಎಸ್ಎಲ್ಸಿ,ಪಿ ಯು ಸಿ (ವಿಜಾ ್ಞ ನ) ಮತ್ತು ಬಿಎಸ್ಸಿ ಪರೀಕ್ಷೆ ಹಾಜರಾದವರು/ ತೇರ್ಗಡೆಯಾದವರು ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ- 3 ವರ್ಷ,ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ- 3 ವರ್ಷ, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸ್ಸಿಂಗ್ ಮತ್ತು ಟೆಸ್ಟಿಂಗ್- 2 ವರ್ಷದ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು.
ಜುಲೈ 29ರಂದು ಕಂಪ್ಯೂಟರ್ ಸಂಬಂಧಿತ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ www.cipet.gov.in
ಅಥವಾ ದೂರವಾಣಿ ಸಂಖ್ಯೆ: 0821-2510618, ಮೊಬೈಲ್ ಸಂಖ್ಯೆ: 94802 53024, 91410 75968ಗೆ ಸಂಪರ್ಕಿಸಬಹುದಾಗಿದೆ ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥ ಆರ್.ಟಿ.ನಾಗರಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment