ಹೊನ್ನಾವರ : ತಾಲೂಕಿನ ಸಾಲ್ಕೋಡ್ ಪ್ರಾಥಮಿಕ ಆರೊಗ್ಯ ಕೇಂದ್ರ ಅರೇಅಂಗಡಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಜಂಟಿಯಾಗಿ ಡೆಂಗ್ಯೂ ಮಾಸಾಚರಣೆ ಹಿನ್ನಲೆಯಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.
ವೈದ್ಯಾಧಿಕಾರಿ ಡಾ. ಸಂತೋಷ ಮಾತನಾಡಿ ಮಳೆಗಾಲದ ಸಮಯದಲ್ಲಿ ಡೆಂಗ್ಯೂ, ಮಲೇರಿಯಾದಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಬೇಕು. ಈ ವರ್ಷ ಕೊವಿಡ್-19 ವೈರಸ್ ಕೂಡಾ ತನ್ನ ಆರ್ಭಟ ತೋರುತ್ತಿದೆ. ಮಲೇರಿಯಾ, ಡೆಂಗ್ಯೂ ಮತ್ತು ಕೊವಿಡ್-19 ರೋಗ ಲಕ್ಷಣಗಳು ಸರಿಸುಮಾರು ಒಂದೇ ಆಗಿರುವುದರಿಂದ ಇವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ.
ಜತೆಗೆ ಎಲ್ಲಾ ರೋಗ ಲಕ್ಷಣಗಳು ಒಟ್ಟಿಗೆ ಕಾಣಿಸಿಕೊಂಡರೆ ಚಿಕಿತ್ಸೆ ಪಡೆಯುವುದೂ ಸಹ ಕಷ್ಟವಾಗುತ್ತದೆ. ಎಲುಬು ನೋವು, ಮೈಕೈ ಸೆಳೆತ, ತೀವ್ರ ತಲೆನೋವು ಡೆಂಗ್ಯೂ ಆರಂಭಿಕ ಲಕ್ಷಣವಾಗಿದೆ ಜತೆಗೆ ಸ್ನಾಯು ಮತ್ತು ಕೀಲು ನೋವು, ವಾಕರಿಕೆ,ಜ್ವರ, ವಾಂತಿ ಮತ್ತು ಅತಿಸಾರದೊಂದಿಗೆ ದೇಹವು ಕುಂಠಿತಗೊಳ್ಳುತ್ತದೆ. ಇವುಗಳು ಡೆಂಗ್ಯೂ ವೈರಸ್ನ ಲಕ್ಷಣಗಳಾಗಿದ್ದು ಯಾವುದೇ ಜ್ವರ ಕಾಣಿಸಿಕೊಂಡರು ನಿಲಕ್ಷ ಮಾಡದೇ ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಆರೊಗ್ಯ ನಿರಿಕ್ಷೀಣಾಧಿಕಾರಿ ಚಿದಾನಂದ ಎಸ್, ಪ್ರಾಥಮಿಕ ಆರೊಗ್ಯ ಸುರಕ್ಷಣಾಧಿಕಾರಿ ಮುಕ್ತಾ ನಾಯ್ಕ,ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Leave a Comment