ಹೊನ್ನಾವರ ;ತಾಲೂಕಿನ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಸಹಾಯಕ ಕೃಷಿ ನಿರ್ದೇಶಕರು ಅರ್ಜಿ ಆಹ್ವಾನಿಸಿದ್ದಾರೆ. ಆಸಕ್ತರು ಹೊನ್ನಾವರ ಕೃಷಿ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಮಾಹಿತಿಯೊಂದಿಗೆ ಅಗಷ್ಟ ೧೫ರೊಳಗೆ ಸಲ್ಲಿಸಬೇಕಿದೆ.
ಕೃಷಿ, ಸಮಗ್ರ ಬೆಳೆ ಪದ್ದತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ತೋಟಗಾರಿಕೆ, ಹೈನುಗಾರಿಕೆ, ಆಧುನಿಕ ಯಂತ್ರೋಪಕರಣಗಳ ಬಳಕೆ, ಹೈಟೆಕ್ ತಂತ್ರಜ್ಞಾನ ಬಳಕೆ, ರೇಷ್ಮೆ ಬೇಸಾಯ, ಅರಣ್ಯ ಕೃಷಿ ಇತ್ಯಾದಿ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ರೈತರು ಆಧಾರ, ಬ್ಯಾಂಕ್ ಪಾಸ್ಪುಸ್ತಕ, ಪಹಣಿ ಪತ್ರದ ನಕಲು ಪ್ರತಿಗಳು, ಛಾಯಾಚಿತ್ರ ಹಾಗೂ ಸಾದನೆಗೈದ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ಕೃಷಿ ನಿರ್ದೇಶಕರು ಹೊನ್ನಾವರ, ರೈತ ಸಂಪರ್ಕ ಕೇಂದ್ರ, ಮಂಕಿ ಹಾಗೂ ಹಡಿನಬಾಳ ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment