ಹೊನ್ನಾವರ: ತಾಲೂಕಿನ ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯಲ್ಲಿ ಗುಂಡಬಾಳ ನದಿಪ್ರವಾಹ ಬಂದು ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ನಾಡದೋಣಿ ಇದ್ದಲ್ಲಿ ಪ್ರವಾಹ ಬಂದಾಗ ಕಾಳಜಿ ಕೇಂದ್ರ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸಾಧ್ಯ ಎಂದು ಮನವಿ ಮಾಡಿದ್ದರು.
ಪಂಚಾಯತಿಯಿಂದ ಕ್ರೀಯಾಯೋಜನೆ ಮಾಡಲು ಆಗಲ್ಲೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಇದರಂತೆ ಪಂಚಾಯತಿ ಅನುದಾನದಲ್ಲಿ 4 ನಾಡದೋಣಿ ಖರೀದಿಸಿದ್ದು, ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ಇದರಿಂದ ಚಿಕ್ಕನಕೋಡ್, ಹೆಬೈಲ್, ಕೆಂಚಗಾರ, ಮುಟ್ಟಾ ಭಾಗದ ಜನರಿಗೆ ಅನೂಕೂಲವಾಗಲಿದೆ.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ತಾ.ಪಂ.ಸದಸ್ಯ ಆರ್.ಪಿ.ನಾಯ್ಕ, ಗ್ರಾ.ಉಪಾಧ್ಯಕ್ಷೆ ಆಶಾ ನಾಯ್ಕ, ಪಿಡಿಓ ಗೀತಾ ಹೆಗಡೆ, ಹರಿಯಪ್ಪ ನಾಯ್ಕ, ಕೃಷ್ಣ ನಾಯ್ಕ, ಸಚೀನ್ ಶೇಟ್ ಗ್ರಾಮಸ್ಥರು ಹಾಜರಿದ್ದರು.
Leave a Comment