ಯಲ್ಲಾಪುರ : ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಅಂತರಾಜ್ಯ ಕಳ್ಳನೊರ್ವನನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದ್ದು. ಬಂದಿತನಿಂದ 2,5 ಲಕ್ಷ ರು ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡು 1 ಲಕ್ಷ ರು ಮೌಲ್ಯದ ಪಲ್ಸರ್ ಬೈಕನ್ನು ಜಪ್ತುಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಕಾರವಾರ ತಾಲೂಕಿನ ಶಿಅವಾಡದ ಅಶೋಕ ಹನುಮಂತ ಬಂಡಿವಡ್ಡರ್ (23) ಎಂದು ಗುರುತಿಸಲಾಗಿದೆ ಈ ಕುರಿತು ಡಿಸೆಂಬರ್ 19.2020 ರಂದು ಚಂದ್ರಶೇಖರ ನರಸಿಂಹ ಹೆಗಡೆ ಎಂಬುವವರಯ ಯಲ್ಲಾಪುರದ ಶಾರದ ಗಲ್ಲಿಯಲ್ಲಿರುವ ಮನೆಯ ಮುಂದಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಮನೆಯ ಬೆಡ್‍ರೂಮ್‍ನ ಗೋದ್ರೆಜ್ ಕಪಾಟಿನಲ್ಲಿದ್ದ ಬೆಳ್ಳಿ, ಬಂಗಾರದ ಆಭರಣ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು.


ಪ್ರಕರಣ ದಾಖಲಿಸಿಕೊಂಡಿದ್ದ ಯಲ್ಲಾಪುರ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಆತನಿಂದ 55. ಗ್ರಾಂ.ನ ಎರಡು ಬಂಗಾರದ ಚೈನ್, ಒಂದು ಬಂಗಾರದ ಬ್ರ್ಯಾಸ್ಲೆಟ್, ಮೂರು ಬಂಗಾರದ ಲಕ್ಷ್ಮಿ ಪದಕ ಸೇರಿದಂತೆ 2,5 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ .
ಈತ ಜಿಲ್ಲೆಯ ಕಾರವಾರ, ಯಲ್ಲಾಪುರ, ಭಟ್ಕಳ, ಸಿದ್ದಾಪುರ ಹಾಗೂ ಶಿವಮ್ಗೊಗ ಜಿಲ್ಲೆಯ ಸೊರಬ ಅನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರ ರಾಜ್ಯದ ಕೆಲ ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ತಿಳಿದು ಬಂದಿದೆ.
ಅದಲ್ಲದೇ ಕಳೆದ 3-4 ವರ್ಷಗಳಿಂದ ಯಲ್ಲಾಪುರ ಪಟ್ಟಣ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಕಳ್ಳತನ ನಡೆಸಿದ ಎನ್ನಲಾಗಿದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರ ಜುಲೈ 3 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ ಒಂದು ನಕ್ಲೆಸ, ಎರಡು ಉಂಗುರು, ಮೂರು ಜೊತೆ ಕಿವಿಯ ಒಲೆ ಹಾಗೂ 100 ಗ್ರಾಂ ಬಳ್ಳಿಯ ಆಭರಣ ಸೇರಿದಂತೆ ಒಟ್ಟು 2,2 ಲಕ್ಷ ರು. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅದೀಕ್ಷಕ ಬದರಿನಾಥ ಶಿರಸಿ ಪೊಲೀಸ್ ಉಪಾಧೀಕ್ಷಕ ಶಶಿ, ರವಿ ನಾಯ್ಕ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿ.ಐ. ಸುರೇಶ ಯಳ್ಳೂರ ನೇತೃತ್ವದಲ್ಲಿ ಪಿ.ಎಸ್.ಐ. ಮಂಜುನಾಥ ಗೌಡ, ಪ್ರೊ ಪಿ.ಎಸ್.ಐ. ಮುಷಾಹಿದ್, ಅಹ್ಮದ್, ಸಿಬ್ಬಂದಿಗಳಾದ ಮಹಮ್ಮದ್ ಶಬ್ಬೀರ ಬಸವರಾಜ ಹಗರಿ ಗಜಾನನ ನಾಯ್ಕ ನಾಗಪ್ಪ ಲಮಾಣಿ ವಿನೋದ ಕುಮಾರ ರೆಡ್ಡಿ, ಬಸವರಾಜ ಡಿ.ಕೆ ಚನ್ನಕೇಶವ, ಅಮರ ಗೀರಿಶ ಲಮಾಣಿ ನಂದೀಶ ಗುಡ್ಡಡಗಿ, ಚಿದಂಬರ ಅಂಗಡಿ ವಿಜಯ ಜಾಧವ ಶೋಭಾ ನಾಯ್ಕ ಕೃಷ್ಣ ಸುಧೀರ ಮಡಿವಾಳ ರಮೇಶ ನಾಯ್ಕ ಉದಯ ಗುನಗಾ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಇದ್ದರೆ.
Leave a Comment