
ಯಲ್ಲಾಪುರ: ತಾಲೂಕಿನಾದ್ಯಂತ ಎಡಬಿಡದೇ ಸುರುಯುತ್ತಿರುವ ಅಬ್ಬರದ ಮಳೆಯಿಂದಾಗಿ ಗುರುವಾರ ತಾಲೂಕಿನ ಡಬ್ಗುಳಿ ,ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿದು ಸಂಚಾರ ಬಂದಾಗಿದೆ.
ಕಳೆದರೆಡು ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟಿçಯ ಹೆದ್ದಾರಿ ೬೩ ಅರಬೈಲ್‌ಘಟ್ಟದಲ್ಲಿ ಗುಡ್ಡ ಕುಸಿತಗೊಂಡು ಸಂಚಾರ ಸಂಪೂರ್ಣ ಬಂದಾಗಿದೆ.ಅದೃಷ್ಟವಶಾತ್ ಯಾವದೇ ಜನ ,ಜಾನುವಾರುಗಳಿಗಾಗಲಿ ಅಪಾಯವಾಗಿಲ್ಲ.
ಹಲವೆಡೆ ರಸ್ತೆಗೆ ನೀರು ನುಗ್ಗಿ ಸಂಚಾರ ಅಸ್ತö್ಯವ್ಯಸ್ತವಾಗಿದೆ .ನದಿ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಅಪಾಯದ ಮಟ್ಟವನ್ನು ತಲುಪಿವೆ. ತಾಲೂಕಿನ ಗಡಿಯ ಗುಳ್ಳಾಪುರ ಬಳಿ ಗಂಗಾವಳಿ ನದಿ ಬೊರ್ಗರೆಯುತ್ತಲಿದ್ದು ,ಕಳೆದ ಬಾರಿ ಉಂಟಾದ ಪ್ರವಾಹ ಪರಿಸ್ಥಿತಿ ನೆನಪಿಸುವಂತಿದೆ ಇದರಿಂದ ನದಿ ತಟದ ಜನರಲ್ಲಿ ನೆರೆಯ ಭೀತಿ ಸೃಷ್ಟಿಸಿದೆ.
Leave a Comment