
ಯಲ್ಲಾಪುರ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತೊಂದರೆಗೆ ಒಳಗಾದವರಿಗೆ ನೆರವು ನೀಡಲು ವಿಶ್ವದರ್ಶನ ಆಡಳಿತ ಮಂಡಳಿ ತೀರ್ಮಾನಿಸಿದೆ.
ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ತಮ್ಮ ಅಗತ್ಯತೆಯ ಬಗ್ಗೆ ತಿಳಿಸಬಹುದಾಗಿದೆ. ಜೊತೆಗೆ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ ಮೊದಲಾದ ಸಮಸ್ಯೆ ಉಂಟಾಗಿ ಹಿಟಾಚಿಯಂತಹ ಯಂತ್ರೋಪಕರಣಗಳ ಅಗತ್ಯ ಇದ್ದರೂ ತಿಳಿಸಬಹುದಾಗಿದೆ.ವಿಶ್ವದರ್ಶನ ಸೇವಾ ತಂಡವೂ ಈ ಕಾರ್ಯವನ್ನು ನಿಭಾಯಿಸಲಿದೆ.
ಭವಿಷ್ಯದಲ್ಲಿ ಎದುರಾಗಬಹುದಾದ ಪ್ರಕೃತಿ ವಿಕೋಪ, ಅನಾರೋಗ್ಯ, ಅಪಘಾತ ಸೇರಿಸಂತೆ ತುರ್ತು ಪರಿಸ್ಥಿತಿಯ ವೇಳೆ ಜನರಿಗೆ ನೆರವು ನೀಡಲು “ವಿಶ್ವದರ್ಶನ ಸೇವಾ” ತಂಡ ಸಿದ್ಧಗೊಂಡಿದೆ. ಮಾಹಿತಿಗಾಗಿ 7337875279 ಅಥವಾ 8747017169ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿhttps://chat.whatsapp.com/D0Ry5Povwke1s77ibSLq4A
Leave a Comment