ಯಲ್ಲಾಪುರ :ಶಿರ್ಲೆ ಜಲಪಾತಕ್ಕೆಂದು ಹೋಗಿ ಕಾಡಿನಲ್ಲಿ ನಾಪತ್ತೆಯಾದವರು ಸುರಕ್ಷಿತವಾಗಿ ಪತ್ತೆಯಾಗಿದ್ದು, ಅವರನ್ನು ಯಲ್ಲಾಪುರಕ್ಕೆ ಕರೆದುಕೊಂಡು ಬರಲಾಗಿದೆ.
ಹುಬ್ಬಳ್ಳಿಯ ನವನಗರ ಮೆಹಬೂಬ್, ಇಮ್ತಿಯಾಜ್, ಅಹಮದ್, ಶಾನವಾಜ,ಅಲ್ತಾಫ್ ಹಾಗೂ rc3 ಡಿಯೋ ಸ್ಕೂಟರ್ ನಲ್ಲಿ ಗುರುವಾರ ಜಲಪಾತಕ್ಕೆ ತೆರಳಿದ್ದುರು. ಹಳ್ಳ ದಾಟಲು ಇದ್ದ ಕಾಲುಸಂಕ ದಲ್ಲಿ ಅವರು ತೆರಳಿದ್ದರು. ಆದರೆ, ನೀರಿನ ಪ್ರವಾಹ ಹೆಚ್ಚಾಗಿ,ಕಾಲುಸಂಕ ಕೊಚ್ಚಿಕೊಂಡು ಹೋಯಿತು ಇದರಿಂದ ಪುನಃ ಬರಲಾಗದೆ ಜಲಪಾತವಿರುವ ಗುಡ್ಡದ ಮತ್ತೊಂದು ಭಾಗದಲ್ಲಿ ರಾತ್ರಿ ಕಳೆದರು.

ಶುಕ್ರವಾರ ಬೆಳಿಗ್ಗೆ ದಾರಿ ಹುಡುಕುತ್ತ ರಾಘವೇಂದ್ರ ಭಟ್ ಎಂಬವರ ತೋಟಕ್ಕೆ ತಲುಪಿದರು. ಅವಳು ಬೆಳಗ್ಗೆ ತೋಟಕ್ಕೆ ತೆರಳಿದ್ದಾಗ ತೋಟದ ಮೂಲೆಯಲ್ಲಿ 6ಮಂದಿ ನಡುಗುತ್ತ ನಿಂತಿರುವುದು ಕಂಡು ಬಂದಿತ್ತು. ನಂತರ ಅವರು ಪೊಲೀಸ್, ಅರಣ್ಯಧಿಕಾರಿಗಳಿಗೆ ತಿಳಿಸಿ ದರು. ಇದೀಗಯಲ್ಲಾಪುರ ಪೊಲೀಸ್ ಠಾಣೆ ಯಲ್ಲಿ ಆಶ್ರಯ ಪಡೆದಿದ್ದಾರೆ

Leave a Comment